ಹಂಪಾದೇವನಹಳ್ಳಿಯಲ್ಲಿ ಎಸ್ಸಿ ಎಸ್ಟಿ ರೈತರ ಭೂಮಿಗೆ ಏತ ನೀರಾವರಿಯಿಂದ ನೀರೊದಗಿಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಚಾಲನೆ ನೀಡಿದರು. ಪ್ರಮುಖರಾದ ವಿಜಯಕುಮಾರ್, ವಿಶ್ವಜಿತ್‌ಪಾಟೀಲ್, ಎ.ಹುಲುಗಪ್ಪ, ಯು.ಗುರುಮೂರ್ತಿ, ಇಟ್ಗಿ ಬಸಪ್ಪ ಇತರರಿದ್ದರು.
ಕಂಪ್ಲಿ: ಕ್ಷೇತ್ರದ ರೈತರ ಜಮೀನುಗಳಿಗೆ ಏತ ನೀರಾವರಿ ಮೂಲಕ ನೀರು ಒದಗಿಸಲು ಶಾಸಕರು ಮುಂದಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಹೇಳಿದರು.
2026-27ನೇ ಸಾಲಿನ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ 94ಲಕ್ಷ ರೂ.ಯಲ್ಲಿ ಹಂಪಾದೇವನಹಳ್ಳಿ, ಹೊನ್ನಳ್ಳಿ ಗ್ರಾಮಗಳಲ್ಲಿ ಎಸ್ಸಿ-ಎಸ್ಟಿ ರೈತರ 90ಎಕರೆಗೆ ನೀರು ಹರಿಸುವ ಯೋಜನೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ದರ ಕುಸಿತ, ಇಳುವರಿ ಕುಸಿತ ಮೊದಲಾದ ತೊಂದರೆಗಳಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮೋಟರ್ ಮೂಲಕ ಪೈಪ್‌ಸೆಟ್‌ಗಳಿಂದ ಹೊಲ ಗದ್ದೆಗಳಿಗೆ ನೀರು ಹರಿಸಲು ಯೋಜಿಸಲಾಗಿದೆ ಎಂದರು. ಪ್ರಮುಖರಾದ ಯು.ಗಿರಿಯಪ್ಪ, ಜಿ.ಪಂಪಾಪತಿ, ಛಲವಾದಿ ತಿಪ್ಪಯ್ಯ, ಹರಿಜನ ಹುಲುಗಪ್ಪ, ಆರ್.ಲಿಂಗನಗೌಡ, ಸಿ.ಮಲ್ಲಯ್ಯ, ಕೆ.ವೀರೇಶ, ಸಿದ್ದಾಪುರ ವೆಂಕಟೇಶ, ಹಡ್ಲಿಗಿ ರಾಮಾಂಜಿನಿ, ಕೆ.ರಾಮಾಂಜಿನಿ, ಪೂಜಾರಿ ಗೋವಿಂದಪ್ಪ ಇತರರಿದ್ದರು.