ಕಂಪ್ಲಿಯಲ್ಲಿ ಒಳ ಚರಂಡಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಪ್ರಮುಖರಾದ ಕೆ.ಶ್ರೀನಿವಾಸರಾವ್, ಭಟ್ಟ ಪ್ರಸಾದ್, ಎನ್.ಹಬೀಬ್ ರೆಹಮಾನ್, ಕೆ.ಮಸ್ತಾನ್, ಕೆ.ಎಸ್.ಚಾಂದ್‌ಬಾಷಾ ಇತರರಿದ್ದರು. 
ಬಳ್ಳಾರಿ

ಸುಂದರೀಕರಣಕ್ಕೆ ಒಳ ಚರಂಡಿ ವ್ಯವಸ್ಥೆ ಸಹಕಾರಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ನಿರ್ಮಾಣ
  • ಕಾಮಗಾರಿಗೆ
  • ಚಾಲನೆ
ಕಂಪ್ಲಿ: ಪಟ್ಟಣದ ಸುಂದರೀಕರಣ ಮತ್ತು ಹಸಿರೀಕರಣಕ್ಕೆ ಒಳ ಚರಂಡಿ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ 5ಮತ್ತು 12ನೇವಾರ್ಡ್‌ಗಳಲ್ಲಿ ಎನ್‌ಜಿಟಿ ಪರಿಸರ ಪರಿಹಾರ ಹಾಗೂ ಸ್ವಚ್ಛ ಭಾರತ ಮಿಷನ್ ಅಡಿ 28.35ಕೋಟಿ ರೂ. ಅನುದಾನದಡಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಒಳ ಚರಂಡಿ ಪಟ್ಟಣಿಗರ ಬಹು ವರ್ಷಗಳ ಕನಸಾಗಿದೆ. ಒಳ ಚರಂಡಿ ವ್ಯವಸ್ಥೆಯಿಂದ ಪರಿಸರ ಸ್ವಚ್ಛತೆಗೆ ಅನುಕೂಲವಾಗಲಿದೆ.
16ಕಿ.ಮೀ.ನೆಟ್‌ವರ್ಕ್ ಜತೆ ಎಸ್‌ಟಿಬಿ ಪ್ಲಾಂಟ್ ನಿರ್ಮಿಸಲಾಗುವುದು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಭಟ್ಟ ಪ್ರಸಾದ್, ಎನ್.ಹಬೀಬ್ ರೆಹಮಾನ್, ಕೆ.ಮಸ್ತಾನ್, ಕೆ.ಎಸ್.ಚಾಂದ್‌ಬಾಷಾ, ವೀರಾಂಜನೇಯಲು, ಎ.ಸಿ.ದಾನಪ್ಪ, ಆಟೋ ರಾಘವೇಂದ್ರ, ಬಿ.ಸಿದ್ದಪ್ಪ, ಕೆ.ಮನೋಹರ, ಎಂ.ಗೋಪಾಲ್, ಶೆಕ್ಷಾವಲಿ, ಪಿ.ನಾಗೇಶ್ವರರಾವು, ಬಿ.ನಾರಾಯಣಪ್ಪ, ಗದ್ಗಿ ವಿರೂಪಾಕ್ಷಿ, ಬಿ.ವಿ.ಗೌಡ, ಕೆ.ರಮೇಶ್, ಎನ್.ತಿಮ್ಮಪ್ಪನಾಯಕ, ಮುರಾರಿ,ಸುಧಾಕರ ಇತರರಿದ್ದರು.