ಕಂಪ್ಲಿಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಮಹಾಮನೆ ಕಾರ್ಯಕ್ರಮದಲ್ಲಿ ಎಮ್ಮಿಗನೂರಿನ ಜ್ಞಾನವಿಕಾಸ ಕೇಂದ್ರದ ಕೋಶಾಧಿಕಾರಿ ಬನಶಂಕರಿ ದೊಡ್ಡಬಸಪ್ಪ ವೀರಾಪುರ ಮಾತನಾಡಿದರು. ಪ್ರಮುಖರಾದ ಜಿ.ಪ್ರಕಾಶ, ಎಸ್.ಶಾಮಸುಂದರರಾವ್, ಗಾಯತ್ರಿ ಬೇರ‌್ಗಿ ಇದ್ದರು.
ಕಂಪ್ಲಿ: ಸಾಮಾಜಿಕ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಮಹಿಳೆಯರು ವೈಯಕ್ತಿಕ ಪ್ರಗತಿ ಸಾಧಿಸಬಹುದು ಎಂದು ಎಮ್ಮಿಗನೂರಿನ ಸಾವಿತ್ರಿಬಾಯಿ ಫುಲೆ ಜ್ಞಾನವಿಕಾಸ ಕೇಂದ್ರದ ಕೋಶಾಧಿಕಾರಿ ಬನಶಂಕರಿ ದೊಡ್ಡಬಸಪ್ಪ ವೀರಾಪುರ ಹೇಳಿದರು.
ಪಟ್ಟಣದ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ 184ನೇ ಮಹಾಮನೆ ಕಾರ್ಯಕ್ರಮದಲ್ಲಿ ‘ಪ್ರಸ್ತುತ ದಿನಮಾನಗಳಲ್ಲಿ ವಚನಗಳ ಪ್ರಸ್ತುತತೆ’ ಕುರಿತು ಭಾನುವಾರ ಮಾತನಾಡಿದರು. ಮೊಬೈಲ್ ಮಾಧ್ಯಮವನ್ನು ಯುವಕರು ಜೂಜಾಟಕ್ಕೆ, ಯುವತಿಯರು ಫ್ಯಾಷನ್ ಸಾಮಗ್ರಿಗಳ ಖರೀದಿಗೆ ಬಳಸುತ್ತಿರುವುದು ವಿಪರ್ಯಾಸ. ಮಹಿಳೆಯರು ಸಾಮಾಜಿಕ ಮಾಧ್ಯಮಗಳನ್ನು ಹೊಣೆಗಾರಿಕೆಯಿಂದ ಬಳಸಿಕೊಳ್ಳುವ ಜಾಣ್ಮೆ ತೋರಬೇಕು. ಆಧುನಿಕ ಶಿಕ್ಷಣ ಮಕ್ಕಳಲ್ಲಿ ಸ್ವೇಚ್ಛಾಚಾರ ಹೆಚ್ಚಳಕ್ಕೆ ಪ್ರೇರೇಪಿಸುತ್ತಿದೆ. ಮಕ್ಕಳಿಗೆ ಬಾಲ್ಯದಿಂದಲೇ ವಚನ ಸಂಸ್ಕಾರ ಅಳವಡಿಸುವಲ್ಲಿ ಜಾಗೃತಿ ಅಗತ್ಯ ಎಂದರು.
ಪರಿಷತ್ತಿನ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ವಚನಗಳು ಲೌಕಿಕ, ಅಲೌಕಿಕದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂದರು.
ಬಿಎಸ್‌ವಿ ಶಾಲೆ ಮುಖ್ಯಶಿಕ್ಷಕ ಎಸ್.ಶಾಮಸುಂದರರಾವ್, ಎಮ್ಮಿಗನೂರಿನ ನಿಸರ್ಗ ಸ್ವಸಹಾಯ ಸಂಘದ ಪ್ರತಿನಿಧಿ ಗಾಯತ್ರಿ ಬೇರ‌್ಗಿ, ಪರಿಷತ್ತಿನ ತಾಲೂಕು ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಕೆ.ಚಂದ್ರಶೇಖರ, ಎಚ್.ನಾಗರಾಜ, ಎಲಿಗಾರ ವೆಂಕಟರೆಡ್ಡಿ, ಕೆ.ಯಂಕಾರೆಡ್ಡಿ, ಯು.ಎಂ.ವಿದ್ಯಾಶಂಕರ, ಎಸ್.ರಾಮಪ್ಪ, ಅಂಬಿಗರ ಮಂಜುನಾಥ ಇತರರಿದ್ದರು.