ಕಂಪ್ಲಿ 8ನೇ ವಾರ್ಡ್ ಸಹಿಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಪುರಸಭೆ ಮಾಜಿ ಅಧ್ಯಕ್ಷರಾದ ಅಯ್ಯೋದಿ ವೆಂಕಟೇಶ, ಬಿ.ಸಿದ್ದಪ್ಪ ಉದ್ಘಾಟಿಸಿದರು.
ಕಂಪ್ಲಿ: ತಳವಾರ ಓಣಿಯ ಸಹಿಪ್ರಾ ಶಾಲೆಯಲ್ಲಿ ಗುರುವಾರ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪುರಸಭೆ ಮಾಜಿ ಅಧ್ಯಕ್ಷರಾದ ಅಯ್ಯೋದಿ ವೆಂಕಟೇಶ, ಬಿ.ಸಿದ್ದಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳಲ್ಲಿ ಶಿಸ್ತು, ಕಲಿಕಾ ಉತ್ಸಾಹ ಮೂಡಿಸುವಲ್ಲಿ ಶಿಕ್ಷಕರು ಸದಾ ಶ್ರಮಿಸಬೇಕಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕೌಶಲವನ್ನು ಮಕ್ಕಳಲ್ಲಿ ಪ್ರೇರೇಪಿಸಿದಲ್ಲಿ ಉತ್ತಮ ಅಂಕಗಳೊಂದಿಗೆ ಸೃಜನಶೀಲತೆ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಕಲಿಕಾ ಹಬ್ಬದಲ್ಲಿ 8 ಶಾಲೆಗಳ 64ಕ್ಕೂ ಹೆಚ್ಚು ಮಕ್ಕಳು ಏಳು ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಪ್ರಮುಖರಾದ ನಡವಿ ಮಲ್ಲಿಕಾರ್ಜುನ, ಬಿ.ಈರಪ್ಪ, ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಎ.ನಾಗನಗೌಡ, ಇಸಿಒ ಎಂ.ರೇವಣ್ಣ, ಸಿಆರ್‌ಪಿಗಳಾದ ಎ.ಗಂಗಾಧರ, ಎನ್.ಬಿ.ರೇಣುಕಾರಾಧ್ಯ, ಮುಖ್ಯಶಿಕ್ಷಕರಾದ ಸುಮಿತ್ರಾ, ಜೋಗಿನಾಯ್ಕ ರುದ್ರಪ್ಪ, ಸುನಿತಾ ಪೂಜಾರಿ, ಪರಶುರಾಮ್ ಇತರರಿದ್ದರು.