ಡಾ. ಸುಮನ್ ಡಿ. ಪನ್ನೇಕರ್ 
ಬಳ್ಳಾರಿ

ಅತ್ಯಾಧುನಿಕ ಸೌಲಭ್ಯದ ಸಿಸಿ ಕ್ಯಾಮರಾ ಅಳವಡಿಕೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾದ್ಯಂತ 5 ಕೋಟಿ ರೂ. ವೆಚ್ಚ
  • ಟೆಂಡರ್ ಪ್ರಕ್ರಿಯೆದಿಂದ ವಿಳಂಬ

ಬಳ್ಳಾರಿ :

ನಗರ ಸೇರಿದಂತೆ ಜಿಲ್ಲೆಯೂ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಬೆಳೆಯುತ್ತಿದ್ದು, ಹೊಸ ಬಡಾವಣೆಗಳು ನಿರ್ಮಾಣಗೊಳ್ಳುತ್ತಿವೆ. ಆದ್ದರಿಂದ, ನಗರಕ್ಕೆ ಸಂಪರ್ಕಿಸುವ ಪ್ರಮಖ ರಸ್ತೆಗಳು, ಸೂಕ್ಷಪ್ರದೇಶ ಹಾಗೂ ತಾಲೂಕಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಲು ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ.

ರಾಜ್ಯದಲ್ಲಿ ದಿನೇದಿನೆ ದರೋಡೆ ಹಾಗೂ ಎಟಿಎಂ ಕಳವು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲೇ ನಗರ ಸೇರಿದಂತೆ ತಾಲೂಕುಗಳಲ್ಲಿ ಸೇರಿ ಪೊಲೀಸ್ ಇಲಾಖೆಯ ಸಿಟಿಆರ್‌ಎಸ್ ಯೋಜನೆಯಡಿ ಐದು ಕೋಟಿ ರೂ. ವೆಚ್ಚದಲ್ಲಿ ಸಿಸಿ ಟವಿ ಕಂಟ್ರೋಲ್ ರೂಮ್, 160ಕ್ಕೂ ಅಧಿಕ ಸಿಸಿ ಕ್ಯಾಮರಾ ಅಳವಡಿಸಲು ಈಗಾಗಲೇ ಅನುಮೋದನೆ ಪಡೆದಿದೆ.
ಸುಧಾ ಕ್ರಾಸ್, ಗವಿಯಪ್ಪ ವೃತ್ತ, ದುರ್ಗಮ್ಮ ಗುಡಿ, ಸಂಗಮ್, ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಕೌಲಬಜಾರ್ ಹಾಗೂ ಜಿಲ್ಲೆಯ ಗ್ರಾಮೀಣ, ಸಿರಗುಪ್ಪ, ಸಂಡೂರು, ಕಂಪ್ಲಿ, ಕುರುಗೋಡಿನಲ್ಲಿ ಸದಾ ವಾಹನಗಳ ಸಂಚಾರಕ್ಕೆ ದಟ್ಟವಿರುತ್ತದೆ. ಈ ಪ್ರದೇಶಗಳಲ್ಲಿ ಅಪಘಾತ, ದರೋಡೆ ಹಾಗೂ ಕಳವು ನಡೆದರೆ ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ಸಿಸಿ ಕ್ಯಾಮರಾಗಳ ಮೂಲಕ ಪ್ರಕರಣ ಬೇಧಿಸಲು ಅನುಕೂಲವಾಗಲಿದೆ. ಅಲ್ಲದೇ, ಬಹುತೇಕ ಮನೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಪೊಲೀಸ್ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಈಗಾಗಲೇ ಪೊಲೀಸ್ ಇಲಾಖೆಯಿಂದ ನಗರದ ವೃತ್ತಗಳಲ್ಲಿ 118, ಪೊಲೀಸ್ ಠಾಣೆಗಳಲ್ಲಿ 80 ಹಾಗೂ ಸಾರ್ವಜನಿಕರ ಮನೆಗಳಲ್ಲಿ 3330 ಸೇರಿದಂತೆ ಒಟ್ಟು 3,528ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವೃತ್ತ ಹಾಗೂ ಠಾಣೆಗಳಲ್ಲಿ ಅಳವಡಿಸಿರುವ ಎಲ್ಲ ಕ್ಯಾಮರಾಗಳನ್ನು ಎಸ್ಪಿ ಕಚೇರಿಯ ಬೃಹತ್ ಎಲ್‌ಇಡಿ ಪರದೆಯಲ್ಲಿ ವೀಕ್ಷಿಸಬಹುದಾಗಿದೆ. ಇದರಲ್ಲಿ ಕೆಲವೊಂದು ಸಿಸಿ ಕ್ಯಾಮರಾಗಳು ಹಾಳಾಗಿದ್ದು, ರಿಪೇರಿ ಮಾಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ಮಹಾನಗರ ಪಾಲಿಕೆಯಿಂದ ನಗರದ ಎರಡ್ಮೂರು ವಾರ್ಡ್‌ಗಳಲ್ಲಿ ಹೊಸದಾಗಿ ಸಿಸಿ ಕ್ಯಾಮರಾ ಅಳವಡಿಸಿದೆ. ಜತೆಗೆ ಕಂಪ್ಲಿ ಹಾಗೂ ಸಿರಗುಪ್ಪದಲ್ಲಿ ಪುರಸಭೆಯಿಂದ ಕೆಲ ಕ್ಯಾಮರಾಗಳು ಹಾಕಲಾಗಿದೆ.
ಅತ್ಯಾಧುನಿಕ ಸೌಲಭ್ಯ ಉದ್ದೇಶ : ರಾತ್ರಿ ವೇಳೆಯಲ್ಲೂ ಸ್ಪಷ್ಟ ಚಿತ್ರಣ ನೀಡುವ ಎಚ್‌ಡಿ ರೆಸಲ್ಯೂಶನ್, ನೈಟ್ ವಿಷನ್ ಹಾಗೂ ನಂಬರ್ ಪ್ಲೇಟ್ ಗುರುತಿಸಬೇಕು. ಶಂಕಿತ ಚಲನವಲನಗಳ ಆಟೋ-ಅಲರ್ಟ್, ವಿದ್ಯುತ್ ವ್ಯತ್ಯಯ ಉಂಟಾದಾಗಲೂ ಕ್ಯಾಮೆರಾಗಳು ಸ್ಥಗಿತಗೊಳ್ಳದೇ ಕನಿಷ್ಠ ನಾಲ್ಕರಿಂದ ಐದು ಗಂಟೆಯವರೆಗೆ ಬ್ಯಾಕಪ್ ವ್ಯವಸ್ಥೆ ಮಾಡಬೇಕು. ಸರ್ವರ್‌ಗೆ ತಲುಪಲು ವೇಗದ ಆಪ್ಟಿಕಲ್ ಫೈಬರ್ ನೆಟ್‌ವರ್ಕ್, ಎಲ್ಲ ಕ್ಯಾಮರಾಗಳ ದೃಶ್ಯಾವಳಿಗಳು ಒಂದೇ ಕಡೆ ವೀಕ್ಷಣೆ ಹಾಗೂ ನಿಯಂತ್ರಣಕ್ಕೆ ಸುಸ್ಸಜ್ಜಿತ ಕೊಠಡಿ ನಿರ್ಮಿಸಬೇಕು. ಮಳೆ, ಬಿಸಿಲು ಹಾಗೂ ಧೂಳಿನಿಂದ ಹಾನಿಯಾಗದಂತೆ ವಾಟರ್‌ಪ್ರೂಫ್ ಮತ್ತು ಡಸ್ಟ್-ಪ್ರೂಫ್ ಕೇಸಿಂಗ್ ಸಿಸಿ ಕ್ಯಾಮರಾಗಳ ಅಳವಡಿಸಲು ಉದ್ದೇಶಿಸಿದೆ.
ಟೆಂಡರ್‌ಗೆ ನಿರಾಸಕ್ತಿ : ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಕೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಈಗಾಗಲೇ ಎರಡು ಬಾರಿ ಟೆಂಡರ್ ಕರೆದಿದ್ದು, ಕೇವಲ ಹರಾಜು ಪ್ರಕ್ರಿಯೆಯಲ್ಲಿ ಒಬ್ಬರೇ ಭಾಗಿಯಾಗಿದ್ದರಿಂದ ಪ್ರಕ್ರಿಯೆ ರದ್ದುಗೊಳಿಸಿದೆ. ಅತ್ಯಾಧುನಿಕ ಸೌಲಭ್ಯದ ಕ್ಯಾಮರಾಗಳಿಗೆ ಸರ್ಕಾರ ನೀಡಿರುವ ಅನುದಾನಕ್ಕಿಂತ ಹೆಚ್ಚು ವ್ಯಯವಾಗುವ ಉದ್ದೇಶದಿಂದ ಟೆಂಡರ್‌ಗೆ ನಿರಾಸಕ್ತಿವಹಿಸಿದ್ದಾರೆ ಎನ್ನಲಾಗಿದೆ. ಸದ್ಯ, ಮೂರನೇ ಟೆಂಡರ್ ಕರೆಯಲು ನಿರ್ಧರಿಸಿದ್ದು, ಇದರಲ್ಲಿ ಸಿಸಿ ಕ್ಯಾಮರಾಗಳ ಕ್ವಾಂಟಟಿ(ಪ್ರಮಾಣ) ಕಡಿಮೆ ಹರಾಜು ಪ್ರಕ್ರಿಯೆ ನಡೆಸಲು ಚರ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
"

ಕೋಟ್.. ನಗರದ ಸೇರಿ ತಾಲೂಕಿನಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಸಲು ಸರ್ಕಾರದಿಂದ ಅನುಮೋದನೆ ದೊರೆತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಅಳವಡಿಸಲಾಗುವುದು.- ಡಾ. ಸುಮನ್ ಡಿ. ಪನ್ನೇಕರ್, ಎಸ್ಪಿ, ಬಳ್ಳಾರಿ.

23 ಎರ‌್ರಿಸ್ವಾಮಿ 01
ಡಾ. ಸುಮನ್ ಡಿ. ಪನ್ನೇಕರ್