ಕುರುಗೋಡು ತಾಲೂಕಿನ ಬಾದನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಛದ್ಮವೇಷ ಧರಿಸಿ ಗಮನ ಸೆಳೆದರು.  
ಬಳ್ಳಾರಿ

ಮಕ್ಕಳಲ್ಲಿ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿ Reading News Paper

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಗೆ ಮುಖ್ಯ ಶಿಕ್ಷಕಿ ಎಂ.ನಿರ್ಮಲಾ ಸಲಹೆ
  • ಗೆಣಿಕೆಹಾಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಕುರುಗೋಡು: ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸಹಾಯಕವಾಗಿದೆ ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಂ.ನಿರ್ಮಲಾ ಹೇಳಿದರು. ಬಾದನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗೆಣಿಕೆಹಾಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗು ಕಲಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಯನ, ನೃತ್ಯ, ಅಭಿನಯ ಸೇರಿ ಇತರ ಕಲೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಬೆನ್ನುತಟ್ಟುವ ಮೂಲಕ ಪ್ರತಿಭೆಗೆ ನೀರೆರೆಯುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಪಾಲಕರು ಮಕ್ಕಳಿಗೆ ದಿನಪತ್ರಿಕೆ ಹಾಗೂ ಸಾಹಿತ್ಯ ಪುಸ್ತಕ ಓದುವ ಹವ್ಯಾಸ ರೂಢಿಸಬೇಕು ಎಂದರು.
ಭರತನಾಟ್ಯ, ಜಾನಪದ ನೃತ್ಯ, ಮಿಮಿಕ್ರಿ, ಕವ್ವಾಲಿ, ಚಿತ್ರಕಲೆ ರಂಗೋಲಿ ಸೇರಿ ಇತರ ಸ್ಪರ್ಧೆಗಳು ನಡೆದವು. ಪಾಂಡುನಗರ ಶಾಲೆಯ ವಿದ್ಯಾರ್ಥಿ ಕಲ್ಗುಡೆಪ್ಪ ಬೈಲಾಟ ಪ್ರದರ್ಶನ ಗಮನ ಸೆಳೆಯಿತು. ನಿವೃತ್ತ ಶಿಕ್ಷಕರಾದ ಡಿ.ಗಂಗಾಧರ, ಸಿ.ಕೆ.ಭೀಮಣ್ಣ, ಸಿಆರ್‌ಪಿ ಬಸವರಾಜ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಮಸೂತಿ, ಎಸ್‌ಡಿಎಂಸಿ ಅಧ್ಯಕ್ಷ ಕರಿಬಸಪ್ಪ ಗೆಣಿಕೆಹಾಳು, ಸಿಆರ್‌ಪಿ ಬಸವರಾಜ, ಶಿಕ್ಷಕರಾದ ಗವಿಸಿದ್ದಪ್ಪ. ವಿಕ್ರಮ್, ಶೆಕ್ಷಾವಲಿ, ಮಣ್ಣೂರು ಬಸವರಾಜ, ಎಚ್.ನಾಗರಾಜ ಇದ್ದರು.