ಕೂಡ್ಲಿಗಿ ಶಿರಸ್ತೇದಾರ್ ಎಸ್.ಚಂದ್ರಶೇಖರಗೆ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಕಾರ್ಮಿಕ ಮುಖಂಡ ಎಚ್.ವೀರಣ್ಣ, ಅಧ್ಯಕ್ಷೆ ಜಿ.ಸುಜಾತ, ಉಪಾಧ್ಯಕ್ಷರಾದ ಎಚ್.ತಿಪ್ಪಮ್ಮ, ಕೆ.ರಾಧಮ್ಮ, ಕೆ.ನಾಗಮ್ಮ, ಪ್ರಧಾನ ಕಾರ್ಯದರ್ಶಿ ಜಿ.ಉಷಾರಾಣಿ, ಸಹ ಕಾರ್ಯದರ್ಶಿಗಳಾದ ಜಯಮ್ಮ, ಸಾಕಮ್ಮ ಇತರರಿದ್ದರು. 
ಬಳ್ಳಾರಿ

ಕಾರ್ಯಕರ್ತೆಯರ ಸಂಬಳ ಹೆಚ್ಚಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಬಿಸಿಯೂಟ ತಯಾರಕರ ಫೆಡರೇಷನ್ ಒತ್ತಾಯ
  • ಕೂಡ್ಲಿಗಿ ಶಿರಸ್ತೇದಾರ್ ಎಫ್‌ಡಿಎಗೆ ಮನವಿ
ಕೂಡ್ಲಿಗಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಸಮಿತಿಯ ಪದಾಧಿಕಾರಿಗಳು ಶಿರಸ್ತೇದಾರ್ ಎಸ್.ಚಂದ್ರಶೇಖರ ಹಾಗೂ ಬಿಸಿಯೂಟ ಯೋಜನಾಧಿಕಾರಿ ಕಚೇರಿ ಎಫ್‌ಡಿಎ ಎಸ್.ಎಂ.ನಟರಾಜ ಸ್ವಾಮಿಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಮುಖಂಡ ಎಚ್.ವೀರಣ್ಣ ಮಾತನಾಡಿ, 25 ವರ್ಷಗಳಿಂದ ಬಿಸಿಯೂಟ ಯೋಜನೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ಸರ್ಕಾರದ ನಿಯಮದ ಪ್ರಕಾರ ಅಡುಗೆ ತಯಾರಿಸಿ, ಮಕ್ಕಳಿಗೆ ಉಣಬಡಿಸುತ್ತಿದ್ದು, ಆರಂಭದಲ್ಲಿ 300ರೂ.ಯಿಂದ ಈಗ 4,700ರೂ. ವೇತನ ಪಡೆಯುತ್ತಿದ್ದಾರೆ. ಬೆಲೆ ಏರಿಕೆಯ ಈ ದಿನಗಳಲ್ಲಿ ವೇತನ ಯಾವುದಕ್ಕೂ ಸಾಲದು.
ಕಾಂಗ್ರೆಸ್ ನಾಯಕರು 6ನೇ ಗ್ಯಾರಂಟಿಯಾಗಿ 18,000ರೂ. ನೀಡುತ್ತೇವೆಂದು ತಿಳಿಸಿದ್ದರು. ಈವರೆಗೂ ಯಾವುದೇ ಕ್ರಮವಿಲ್ಲ. ಇನ್ನು ಪ್ರತಿ ಶಾಲೆಗಳಲ್ಲಿ ಆಹಾರ ಸಾಮಾಗ್ರಿಗಳು ಮಕ್ಕಳ ಹಾಜರಾತಿ ಅನುಗುಣಕ್ಕಿಂತ ಕಡಿಮೆ ಬರುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಡುಗೆ ತಯಾರಿಸುವ ವೇಳೆ ಅಗ್ನಿ ಅವಘಡ, ಅಪಘಾತದಿಂದ ಮೃತ ಅಥವಾ ಗಾಯವಾದರೆ 10 ಲಕ್ಷ ರೂ. ಪರಿಹಾರ ಮತ್ತು ಕುಟುಂಬದವರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಫೆಡರೇಷನ್ ತಾಲೂಕು ಸಮಿತಿ ಅಧ್ಯಕ್ಷೆ ಜಿ.ಸುಜಾತ, ಉಪಾಧ್ಯಕ್ಷರಾದ ಎಚ್.ತಿಪ್ಪಮ್ಮ, ಕೆ.ರಾಧಮ್ಮ, ಕೆ.ನಾಗಮ್ಮ, ಪ್ರಧಾನ ಕಾರ್ಯದರ್ಶಿ ಜಿ.ಉಷಾರಾಣಿ, ಸಹ ಕಾರ್ಯದರ್ಶಿಗಳಾದ ಜಯಮ್ಮ, ಸಾಕಮ್ಮ, ಎ.ಗೌರಮ್ಮ, ಅಂಜಿನಮ್ಮ, ಕರಿ ಬಸಮ್ಮ, ವನಜಾಕ್ಷಿ, ರಾಜೇಶ್ವರಿ, ಉಮಾದೇವಿ, ಲೋಲಾಕ್ಷಿ, ಕೊತ್ಲಮ್ಮ, ಲಕ್ಷ್ಮೀ, ಶಾರದಮ್ಮ ಇತರರಿದ್ದರು.