ಸಂಡೂರಿನ ತಾಪಂ ಸಭಾಂಗಣದಲ್ಲಿ ವಿಶ್ವ ಅಂಗವಿಕಲರ ದಿನ ಕಾಯಕ್ರಮವನ್ನು ತಾಪಂ ಇಒ ಮಡಗಿನ ಬಸಪ್ಪ ಉದ್ಘಾಟಿಸಿದರು. ಎಪಿಪಿ ವಡ್ರ ಅಣ್ಣೇಶಿ, ವಕೀಲ ಟಿ.ಎಂ.ಶಿವಕುಮಾರ್, ಬಿಸಿಯೂಟ ಯೋಜನಾಧಿಕಾರಿ ಶ್ರೀಧರ ಮೂರ್ತಿ, ಸಿಡಿಪಿಒ ಪಿ.ನಾಗರಾಜ ಇತರರಿದ್ದರು.
- ವಿಶ್ವ ಅಂಗವಿಕಲರ ದಿನ
- ಸರ್ಕಾರ
- ನೆರವು
ಅಂಗವಿಕಲರ ಪಿಂಚಣಿ ಹಣ ಹೆಚ್ಚಿಸಲಿ
ಸಂಡೂರು: ವಿಶ್ವಸಂಸ್ಥೆ 1981ರಿಂದ ವಿಶ್ವ ಅಂಗವಿಕಲರ ದಿನ ಆಚರಿಸುತ್ತಿದೆ. ಅಂಗವೈಕಲ್ಯ ಪ್ರಮಾಣ ಪರಿಗಣಿಸಿ ಪಿಂಚಣಿ ಹಣವನ್ನು ಹೆಚ್ಚಿಸಬೇಕು ಎಂದು ಟಿಎಚ್‌ಒ ಭರತ್ ಕುಮಾರ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಪಂ, ಕಂದಾಯ ಇಲಾಖೆ, ಸಿಡಿಪಿಒ ಇಲಾಖೆ ಸಹಯೋಗದಲ್ಲಿ ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಪಂ ಇಒ ಮಡಗಿನ ಬಸಪ್ಪ ಮಾತನಾಡಿ, ತಾಪಂ, ಸಿಡಿಪಿಒ ಹಾಗೂ ಇತರ ವಿವಿಧ ಇಲಾಖೆಗಳ ಅನುದಾನದಲ್ಲಿ ಅಂಗವಿಕಲರಿಗೆ ಸರ್ಕಾರ ನೆರವು ನೀಡುತ್ತಿದೆ ಎಂದರು.
ಸಿಡಿಪಿಒ ಪಿ.ನಾಗರಾಜ, ಎಪಿಪಿ ವಡ್ರ ಅಣ್ಣೇಶಿ, ವಕೀಲರಾದ ಫಾರೂಕ್ ಅಹ್ಮದ್, ಟಿ.ಎಂ.ಶಿವಕುಮಾರ್, ಬಿಸಿಯೂಟ ಯೋಜನಾಧಿಕಾರಿ ಶ್ರೀಧರಮೂರ್ತಿ, ಪಶು ಸಂಗೋಪನೆ ಇಲಾಖೆ ಎಡಿ ಡಾ.ವಲೀಬಾಷಾ, ವಕೀಲರ ಸಂಘದ ಕಾರ್ಯದರ್ಶಿ ಕುಮಾರಸ್ವಾಮಿ, ತೋರಣಗಲ್ ತಮನ್ನಾ ಅಂಗವಿಕಲರ ಶಾಲೆ ಮುಖ್ಯಶಿಕ್ಷಕಿ ಅನುಷಾ, ಗ್ರಾಪಂ ಕಾರ್ಯದರ್ಶಿ ಹುಲುಗಪ್ಪ, ತಾಲೂಕು ಎಂಆರ್‌ಬ್ಲುೃ ಸಿ.ಕರಿಬಸಜ್ಜ, ಬಳ್ಳಾರಿ ಗೋವಿಂದಪ್ಪ ಇತರರಿದ್ದರು.