ನವಲಿ ಗ್ರಾಮದಲ್ಲಿ ಆಯೋಜಿಸಿರುವ ಎನ್‌ಎಸ್‌ಎಸ್ ವಿಶೇಷ ಶಿಬಿರವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. ಕಾಲೇಜು ಪ್ರಾಚಾರ್ಯ ವಿಜಯಕುಮಾರ್, ಎನ್‌ಎಸ್‌ಎಸ್ ಘಟಕಾಧಿಕಾರಿಗಳಾದ ಡಾ.ಸುರೇಶ ಬೂದನೂರು, ಉಮಾದೇವಿ, ಭಾಗ್ಯ ಮಠಪತಿ ಇತರರಿದ್ದರು.
- ಎನ್‌ಎಸ್‌ಎಸ್
- ಶಿಬಿರ
- ಉದ್ಘಾಟನೆ
ಹೂವಿನಹಡಗಲಿ: ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾವನ್ನು ತುಂಬುವ ಜತೆಗೆ ಉತ್ತಮ ಅಭ್ಯಾಸವನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪದವಿ ಮಹಾವಿದ್ಯಾಲಯದಿಂದ ತಾಲೂಕಿನ ನವಲಿ ಗ್ರಾಮದಲ್ಲಿ ಏಳುದಿನಗಳ ಕಾಲ ಆಯೋಜಿಸಿರುವ ಎನ್‌ಎಸ್‌ಎಸ್ ವಿಶೇಷ ಶಿಬಿರವನ್ನು ಮಂಗಳವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು.
ಸಾಂಪ್ರದಾಯಿಕ ಪರಂಪರೆ, ನೆಲಮೂಲ ಸಂಸ್ಕೃತಿ ಅಳವಡಿಸಿಕೊಂಡು ದೇಶ ಕಟ್ಟುವುದಕ್ಕೆ ಶೈಕ್ಷಣಿಕ ಸೇವಾ ಶಿಬಿರಗಳು ಸಹಾಯಕವಾಗಿವೆ. ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಶಿಬಿರಗಳ ಶಿಬಿರಾರ್ಥಿಗಳು ಗ್ರಾಮವನ್ನು ಸ್ವಚ್ಛವಾಗಿಸುವ ಕಾರ್ಯ ಮಾಡುವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನ ಹೆಚ್ಚಾಗುತ್ತದೆ. ಈ ದೇಶದ ಯುವ ಶಕ್ತಿಯು ಸರಿಯಾದ ಕ್ರಮದಲ್ಲಿ ಬಳಕೆಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಸರ್ಕಾರಿ ಪದವಿ ಕಾಲೇಜಿಗೆ ಈ ಶೈಕ್ಷಣಿಕ ವರ್ಷದಿಂದಲೇ ಬಿಬಿಎ ಮತ್ತು ಬಿಸಿಎ ವಿಭಾಗಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಪ್ರಾಚಾರ್ಯ ವಿಜಯಕುಮಾರ್, ಎನ್‌ಎಸ್‌ಎಸ್ ಘಟಕಾಧಿಕಾರಿಗಳಾದ ಡಾ.ಸುರೇಶ ಬೂದನೂರು, ಉಮಾದೇವಿ, ಭಾಗ್ಯ ಮಠಪತಿ, ಪ್ರಾಧ್ಯಾಪಕರಾದ ಡಾ.ಸತೀಶ್ ಪಾಟೀಲ, ವೆಂಕಟೇಶ, ಡಾ.ಭೀಮಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಶಿಧರ್ ಹಣ್ಣಿ, ಪ್ರಮುಖರಾದ ಕೃಷ್ಣನಾಯ್ಕ, ಮಂಜುನಾಥ, ಜಗದೀಶ, ಗುಡದಯ್ಯ, ಲಕ್ಷ್ಮಣ, ಪ್ರಶಾಂತ ಇತರರಿದ್ದರು.