ಹೂವಿನಹಡಗಲಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜಿನಿಂದ ಶುಕ್ರವಾರ ನದಿಗೆ 42236 ಕ್ಯೂಸೆಕ್ ನೀರು ಹರಿಸಲಾಯಿತು.
ಹೂವಿನಹಡಗಲಿ: ರಾಜವಾಳ ಸಮೀಪವಿರುವ ಸಿಂಗಟಾಲೂರು ಏತನೀರಾವರಿ ಬ್ಯಾರೇಜಿಗೆ ಶುಕ್ರವಾರ 42236 ಕ್ಯೂಸೆಕ್ ನೀರು ಹರಿದುಬಂದಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಯಿತು.
ಒಳಹರಿವು ಹೆಚ್ಚಳದಿಂದಾಗಿ ಹ್ಯಾರಡ, ಹೊಸಹಳ್ಳಿ, ದಾಸಹಳ್ಳಿ, ಹಿರೇಹಡಗಲಿ, ಹಗರನೂರು, ಮಾನ್ಯರಮಸಲವಾಡ, ನಾಗತಿಬಸಾಪುರ, ತಳಕಲ್ಲು, ಮುದೇನೂರು ಕೆರೆ, ರಾಜವಾಳ, ಮಾಗಳ, ಕೆ.ಅಯ್ಯನಹಳ್ಳಿ, ಹೂವಿನಹಡಗಲಿ ಎರಡನೇ ಹಂತದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಕೆರೆಗೆ ನೀರೆತ್ತುವ ಯೋಜನೆಗೆ ಶಾಸಕ ಕೃಷ್ಣನಾಯ್ಕ ಗುರುವಾರ ಚಾಲನೆ ನೀಡಿದರು.