ಬಿ.ಎಂ.ಈರಪ್ಪಯ್ಯ 
ಬಳ್ಳಾರಿ

ರೈತ ಸಂತೆ ಉದ್ಘಾಟನೆ

ಪ್ರಮುಖ ಮುಖ್ಯಾಂಶಗಳು

  • ಆಹಾರದಿಂದ ಆರೋಗ್ಯವಂತ ಭಾರತ

ಬಳ್ಳಾರಿ :

ಇಲ್ಲಿನ ಗಾಂಧಿಭವನದಲ್ಲಿ ಆ.26ರಂದು ರೈತ ಸಂಘದ ಪ್ರತಿ ಬುಧವಾರದ ರೈತ ಸಂತೆ ಉದ್ಘಾಟಿಸಲಾಗುವುದು ಎಂದು ರೈತ ಬಿ.ಎಂ.ಈರಪ್ಪಯ್ಯ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ನಮ್ದು ರೈತ ಉತ್ಪಾದಕರ ಸಂಸ್ಥೆ ಸಹಯೋಗದೊಂದಿಗೆ ಆರಂಭವಾಗಲಿದೆ. ವಿಷಮುಕ್ತ ಭೂಮಿ ವಿಷಮುಕ್ತ ಆಹಾರದಿಂದ ಆರೋಗ್ಯವಂತ ಭಾರತವನ್ನು ಕಟ್ಟುವಡೆಗೆ ಹೋರಾಟದ ಹಾದಿಯಿಂದ ನಮ್ಮ ಬೆಳೆ- ನಮ್ದು ಬೆಲೆ- ನಮ್ಮದೇ ಮಾರುಕಟ್ಟೆ ಉದ್ದೇಶದಿಂದ ಆರಂಭಿಸಲಾಗಿದೆ ಎಂದರು.

ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಡಿಸಿ ಕೆ.ನಾಗೇಂದ್ರ ಪ್ರಸಾದ್ ಉದ್ಘಾಟಿಸಿಲಿದ್ದಾರೆ. ಜತೆಗೆ ಮಹಿಳಾ ರೈತ ಸಾಲ ವಿಮೋಚನಾ ಸಂಘಗಳ ಉದ್ಘಾಟನೆಯನ್ನು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ಮುಖಂಡರಾದ ಮಾಳಮ್ಮ, ಮಲ್ಲಿಕಾರ್ಜುನ ನೆರವೇರಿಸಲಿದ್ದಾರೆ ಎಂದರು.

ದೇಸಿ ಬೀಜ ಮತ್ತು ಜೀವಾಮೃತ ವಿತರಿಸುವುದರ ಮೂಲಕ ರೈತರನ್ನು ನೈಸರ್ಗಿಕ ಕೃಷಿಗೆ ಶಾಸಕ ನಾರಾಭರತರೆಡ್ಡಿ, ಗಣ್ಯರಾದ ವಿಶ್ವೇಶ್ವರ ಸಜ್ಜನ, ಶಶಿಧರ ಸ್ವಾಮಿ ಸ್ವಾಗತಿಸಲಿದ್ದಾರೆ. ನಮ್ದು ನೈಸರ್ಗಿಕ ಕೃಷಿ ಉತ್ತೇಜನ ಕೇಂದ್ರವನ್ನು ನೈಸರ್ಗಿಕ ಕೃಷಿ ಸಂತ ಸವಿತಾನಂದ ಸ್ವಾಮೀಜಿ, ಮುಸ್ಲಿಂ ಧರ್ಮದ ಮುಖಂಡ ಹುಮಾಯಾನ್ ಖಾನ್, ಕೈಸ್ತ ಧರ್ಮದ ಮುಖಂಡ ಹೆನ್ರಿ ಡಿಸೋಜ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿ, ಸಚಿವ ಬಿ.ನಾಗೇಂದ್ರ, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್, ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ ಸೇರಿದಂತೆ ಗಣ್ಯರು ಉಪಸ್ಥಿತರಲಿದ್ದಾರೆ ಎಂದರು. ಪ್ರಮುಖರಾದ ಮೋಹನ್, ವಿವೇಕಾನಂದ, ಹುಲಿಕೆರೆ ವಿಶ್ವೇಶ್ವರ ಸಜ್ಜನ್, ಗೋವಿಂದರಾಜುಲು, ಈಶ್ವರ್‌ರೆಡ್ಡಿ, ಶಿಲ್ಪಾ, ರವಿಕುಮಾರ್ ಇದ್ದರು.