ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಕಂಪ್ಲಿಯಲ್ಲಿ ಆರ್‌ಐ ವೈ.ಎಂ.ಜಗದೀಶ್‌ಗೆ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ಕಂಪ್ಲಿ: ಒಳ ಮೀಸಲಾತಿ ಕಾಯ್ದೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಿ ಆರ್‌ಐ ವೈ.ಎಂ.ಜಗದೀಶಗೆ ಮನವಿ ಸಲ್ಲಿಸಲಾಯಿತು.
ಒಳ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸಿದ್ದು, ಬೇಡಿಕೆ ಈತನಕ ಈಡೇರಿಲ್ಲ. ಈ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ರಾಜ್ಯ ಸರ್ಕಾರ ಶೇ.6 ಮೀಸಲನ್ನು ಮಾದಿಗ ಮತ್ತು ಸಂಬಂಧಿತ ಸಮುದಾಯಗಳಿಗೆ ನೀಡಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಜಿ.ಪ್ರಸಾದ್, ಎಮ್ಮಿಗನೂರು ಎಚ್.ಜಡೆಪ್ಪ, ಬೆಳಗೋಡ್ ಬಸವರಾಜ, ಸಣಾಪುರ ಮರಿಸ್ವಾಮಿ, ಆರ್.ಎಂ.ರಾಮಯ್ಯ, ಸಣಾಪುರ ಹನುಮಂತಪ್ಪ, ಮೆಟ್ರಿ ಎಚ್.ಕುಮಾರಸ್ವಾಮಿ, ಎಮ್ಮಿಗನೂರು ಎಚ್.ಪಂಪಾಪತಿ, ಎಚ್.ಶ್ರೀನಿವಾಸ, ವೀರಾಂಜನೇಯ, ಯಲ್ಲಪ್ಪ, ಎನ್.ಬುಜ್ಜಿಕುಮಾರ್, ದೇವಲಾಪುರ ರಾಮಯ್ಯ, ಎಚ್.ಜಗದೀಶ, ಗೋಪಿ, ಗಂಗಣ್ಣ ಇತರರಿದ್ದರು.