ಬಳ್ಳಾರಿಯ ಪತ್ರಿಕಾಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಪುರುಷೋತ್ತಮ ಹಂದ್ಯಾಳ್ ಅವರನ್ನು ಸ್ಪಂದನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ದೇವಣ್ಣ ಸನ್ಮಾಸಿದರು. ಪತ್ರಕರ್ತರಾದ ಎನ್.ವೀರಭಧ್ರಗೌಡ, ಎಚ್.ಹುಲುಗಣ್ಣ, ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಗೌರವಾಧ್ಯಕ್ಷ ಕೆ.ಪೃಥ್ವಿರಾಜ್ ದೊಡ್ಡಮನೆ ಇದ್ದರು. 
ಬಳ್ಳಾರಿ

ರಂಗಭೂಮಿಗೆ ಕೊಡುಗೆ ಅಪಾರ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ರಂಗ ಭೂಮಿಗೆ ಅಪಾರ ಕೊಡುಗೆ

ಬಳ್ಳಾರಿ :

ಹಿರಿಯ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಜಿಲ್ಲೆಯ ಕನ್ನಡ ರಂಗ ಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಪಂದನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ದೇವಣ್ಣ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಪ್ರಸ್ತಕ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಪುರುಷೋತ್ತಮ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರುಷೋತ್ತಮ ಅವರು ಕೇವಲ ರಂಗನಟರಾಗಿ ಅಷ್ಟೇ ಅಲ್ಲದೆ ಉತ್ತಮ ಛಾಯಾಗ್ರಾಹಕರಾಗಿ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ವ್ಯಕ್ತಿತ್ವವುಳ್ಳವರು. ಅವರಿಗೆ ಈ ಪ್ರಶಸ್ತಿ ದೊರೆತಿರುವುದು ಜಿಲ್ಲೆಯ ರಂಗಭೂಮಿ ಕ್ಷೇತ್ರದ ಎಲ್ಲರೂ ಸಂತಸ ಪಡುವಂತಾಗಿದೆ ಎಂದರು.
===