ಅಕ್ರಮ ಪಡಿತರ ಅಕ್ಕಿ ವಶ 
ಬಳ್ಳಾರಿ

ಅಕ್ರಮ ಪಡಿತರ ಅಕ್ಕಿ ವಶ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಪಡಿತರ
ಬಳ್ಳಾರಿ : ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಹಾಗೂ ಆಹಾರ ಇಲಾಖೆಯು ಸಿಬ್ಬಂದಿ ದಾಳಿ ನಡೆಸಿ ತಾಲೂಕಿನ ಹಂದಿಹಾಳು ಗ್ರಾಮದ ಬಳಿ ವಶಪಡಿಸಿಕೊಂಡಿದ್ದಾರೆ.
ಪಡಿತರ ಅಕ್ಕಿಯನ್ನು ಹಂದಿಹಾಳು ಗ್ರಾಮದಿಂದ ಬಳ್ಳಾರಿ ಕಡೆಗೆ ಹೋಗುವ ಮಾರ್ಗದ ವೇ -ಬ್ರಿಡ್ಜ್ ಬಳಿ ಲಗೇಜ್ ಆಟೋದಲ್ಲಿದ್ದ 45 ಕೆಜಿ ತೂಕದ 44 ಚೀಲಗಳಲ್ಲಿದ್ದ , ಒಟ್ಟು 49.50 ಸಾವಿರ ರೂ. ಮೌಲ್ಯದ 19.80 ಕ್ವಿಂಟಾಲ್ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಕೆ.ಕೆ. ಹಾಳ ಗ್ರಾಮದ ಬಿ.ಶರಭಯ್ಯ, ಜಿ.ರಾಮನಗೌಡ, ವಿನಯಕುಮಾರ್ ಎಸ್., ಸಾದಿಕ್ ಅಲಿ, ವಿ.ಪ್ರಕಾಶ, ಕೆಂಚಪ್ಪ, ಜಾಲಪಾಟಿ ಮಾರೆಣ್ಣ ವಿರುದ್ಧ ಬಳ್ಳಾರಿ ಗ್ರಾಮಾಂತರ ಆಹಾರ ನಿರೀಕ್ಷಕ ಸಿ. ಪಾಪಣ್ಣ ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
===