ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಎರಡು ಆಟೋಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ 
ಬಳ್ಳಾರಿ

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಮೇಲೆ ಅಧಿಕಾರಿಗಳು ದಾಳಿ ವಶ

ಪ್ರಮುಖ ಮುಖ್ಯಾಂಶಗಳು

  • ಅಕ್ರಮವಾಗಿ ಸಾಗಿಸುತ್ತಿದ್ದ
  • ಆಹಾರ ನಿರೀಕ್ಷಕ
  • ಅಧಿಕಾರಿಗಳು ದಾಳಿ

ಬಳ್ಳಾರಿ : ಸಂಡೂರು ತಾಲೂಕಿನ ಡಿ.ಅಂತಾಪುರ ಗ್ರಾಮದಿಂದ ತೋರಣಗಲ್ ಗ್ರಾಮದ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಎರಡು ಆಟೋಗಳ ಮೇಲೆ ಆಹಾರ, ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 41 ಸಾವಿರ ಮೌಲ್ಯದ, 18 ಕ್ವಿಂಟಾಲ್ ಅಕ್ಕಿ ಜತೆ ಆಟೋಗಳನ್ನು ವಶ ಪಡೆದ ಘಟನೆ ಈಚೆಗೆ ನಡೆದಿದೆ. ತಾಲೂಕಿನ ಆಹಾರ ನಿರೀಕ್ಷಕ ಪ್ರದೀಪ್ ತೋರಗಣಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
===