- ಸುತ್ತಿಗೆಯಿಂದ ಬಲವಾಗಿ ಹೊಡೆದು ಹತ್ಯೆ
ಬಳ್ಳಾರಿ : ಪತ್ನಿಯ ಶೀಲ ಶಂಕಿಸಿ ಹಾಗೂ ಏಳು ತಿಂಗಳ ಮಗಳು ತನ್ನ ಸಂತಾನವಲ್ಲ ಎಂಬುದಾಗಿ ಪತಿಯೇ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ನಗರದ ಅಂದ್ರಾಳ್ ನಿವಾಶಿ ಹೊನ್ನುರಪ್ಪ(28) ಬಂಧಿತ. ಪತ್ನಿ ರಾಜೇಶ್ವರಿ (24) ಹಾಗೂ ಆಶ್ವಿನಿ (ಏಳು ತಿಂಗಳು) ಮಗು ಕೊಲೆಯಾದವರು.
ಘಟನೆಯ ಹಿನ್ನಲೆ : ಆರೋಪಿ ಹೊನ್ನೂರಪ್ಪ ಮತ್ತು ರಾಜೇಶ್ವರಿ ಅವರ ವಿವಾಹ ಆರು ವರ್ಷಗಳ ಹಿಂದೆ ನಡೆದಿತ್ತು. ದಂಪತಿಗೆ ಮೂವರು ಮಕ್ಕಳಿದ್ದರು. ಇತ್ತೀಚೆಗೆ ಪತ್ನಿಯ ಶೀಲದ ಕುರಿತು ಅನುಮಾನ ಪಡುತ್ತಿದ್ದ ಹೊನ್ನೂರಪ್ಪ, ಕಿರಿಯ ಮಗಳು ಆಶ್ವಿನಿ ತನ್ನ ಸಂತಾನವಲ್ಲ ಎಂಬುದಾಗಿ ಆಗಾಗ ಜಗಳವಾಡುತ್ತಿದ್ದ. ಜು.30 (ಗುರುವಾರ)ರಂದು ರಾತ್ರಿ ವೇಳೆ ಮನೆಯಲ್ಲಿದ್ದಾಗ ಇದೇ ವಿಷಯಕ್ಕೆ ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿ, ಪತ್ನಿ ರಾಜೇಶ್ವರಿ ಹಾಗೂ ಏಳು ತಿಂಗಳ ಮಗುವಿನ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಮೃತಳ ಸಹೋದರ ನೀಡಿದ ದೂರಿನ ಮೇರೆಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
"
ಕೋಟ್.. ಆರೋಪಿ ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಸುತ್ತಿಗೆ ಜಪ್ತಿ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು. - ಡಾ. ಸುಮನ್ ಡಿ. ಪೆನ್ನೇಕರ್ ಎಸ್ಪಿ. ಬಳ್ಳಾರಿ.