ಬೆಂಬಲಬೆಲೆ ಯೋಜನೆಯಡಿ ಖರೀದಿಸಿರುವ ರಾಗಿ ಹಣ ತ್ವರಿತವಾಗಿ ಪಾವತಿಸಲು ಒತ್ತಾಯಿಸಿ ಹೂವಿನಹಡಗಲಿಯಲ್ಲಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜಗೆ ಕರ್ನಾಟಕ ರಾಜ್ಯರೈತ ಸಂಘ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಗೌರವಾಧ್ಯಕ್ಷ ಪಕ್ಕೀರಪ್ಪ, ಪದಾಧಿಕಾರಿಗಳಾದ ವಿಠಲನಾಯ್ಕ, ಚನ್ನಬಸಪ್ಪ, ಮಂಜುನಾಥ ನಾಯ್ಕ, ಶಿವರಾಜ ಹೊಳಗುಂದಿ ಇತರರಿದ್ದರು.  
ಬಳ್ಳಾರಿ

ರಾಗಿ ಹಣ ತ್ವರಿತ ಪಾವತಿಸಲಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತಸಂಘ ಒತ್ತಾಯ
  • ಹೂವಿನಹಡಗಲಿ ತಹಸೀಲ್ದಾರಗೆ ಮನವಿ
ಹೂವಿನಹಡಗಲಿ: ರೈತರಿಂದ ಸರ್ಕಾರ ಬೆಂಬಲಬೆಲೆ ಯೋಜನೆಯಡಿ ಖರೀದಿಸಿರುವ ರಾಗಿ ಬಾಕಿ ಹಣ ಪಾವತಿಸಲು ಒತ್ತಾಯಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜಗೆ ಕರ್ನಾಟಕ ರಾಜ್ಯ ರೈತಸಂಘ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ಕಳೆದ ಸಾಲಿನ ಮುಂಗಾರು ಹಂಗಾಮಿನ ರಾಗಿಯನ್ನು ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 4886 ರೂ.ನಂತೆ ಒಟ್ಟು 71.500 ಕ್ವಿಂಟಾಲ್ ಖರೀದಿಸಿದ್ದು, 2,310 ರೈತರ ಪೈಕಿ ಕೇವಲ 360 ರೈತರಿಗೆ ಹಣ ಪಾವತಿಸಿದೆ. ಇನ್ನೂ 1,928 ರೈತರಿಗೆ ಹಣ ಪಾವತಿಸಬೇಕಿದ್ದು, ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಪಕ್ಕೀರಪ್ಪ, ಉಪಾಧ್ಯಕ್ಷರಾದ ವಿಠಲನಾಯ್ಕ, ಚನ್ನಬಸಪ್ಪ, ಕಾರ್ಯಾಧ್ಯಕ್ಷ ಮಂಜುನಾಥನಾಯ್ಕ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಸಹಕಾರ್ಯದರ್ಶಿ ದುರುಗಪ್ಪ ಇತರರಿದ್ದರು.