ಹೂವಿನಹಡಗಲಿ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಾಗಾರದಲ್ಲಿ ಸಂಸ್ಥೆ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿದರು. ಬಿಇಒ ಮಂಗಳಾ ಕೆ., ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಮಹಮ್ಮದ್ ರಫಿ, ಪ್ರಮುಖರಾದ ಮಲ್ಲೇಶ್ವರಿ ಜೆ., ಕೊಟ್ರೇಶ್, ಮಾದೇಶ್ವರ ಕೆ. ಇತರರಿದ್ದರು. 
ಬಳ್ಳಾರಿ

ಮಾನವಸಂಪನ್ಮೂಲ ಪ್ರಗತಿ ಕುಂಠಿತ

ಶಾಮಸುಂದರ್ ಕೊಪ್ಪಳಕರ್
ಹೂವಿನಹಡಗಲಿ: ಶಿಕ್ಷಣ ವ್ಯವಸ್ಥೆ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಾಗಾರ ಉದ್ಘಾಟಿಸಿ ಶನಿವಾರ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದಿದ್ದು, ಸರ್ಕಾರಗಳು ಶೈಕ್ಷಣಿಕವಾಗಿ ಅನೇಕ ಸುಧಾರಣೆ ತಂದಿವೆ. ಉತ್ತಮ ಮೌಲ್ಯಗಳೊಂದಿಗೆ ವೈಜ್ಞಾನಿಕ ಪ್ರಗತಿಯೂ ಆಗಿದೆ. ತಂತ್ರಜ್ಞಾನದಿಂದಾಗಿ ಮಾನವಸಂಪನ್ಮೂಲದ ಪ್ರಗತಿ ಕುಂಠಿತಗೊಂಡಿದೆ ಎಂದರು.
ಶಿಕ್ಷಕರಿಂದ ಸಮಾಜದ ಬದಲಾವಣೆ ಸಾಧ್ಯ. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪರಿಸರ, ಆರ್ಥಿಕತೆ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಬಗ್ಗೆ ಚಿಂತನೆ ಮಾಡಬೇಕಿದೆ. ದೇಶದ ಬೇರೆ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಹೆಚ್ಚಾಗಿವೆ. ಎಐನಿಂದ ನಮ್ಮ ಮನಸ್ಸು ನಿಯಂತ್ರಣ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಬಿಇಒ ಮಂಗಳಾ ಕೆ., ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಮಹಮ್ಮದ್ ರಫಿ, ಪ್ರಮುಖರಾದ ಮಲ್ಲೇಶ್ವರಿ ಜೆ., ರೇಣುಕಮ್ಮ, ಕೊಟ್ರೇಶ್, ಮಾದೇಶ್ವರ ಕೆ., ಬನ್ನೆಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪದಾಧಿಕಾರಿಗಳು, ಇತರದ್ದರು.