ಹೊಸಪೇಟೆ-ಅರಸಿಕೆರೆಗೆ ರೈಲು ಶುಕ್ರವಾರ ಹಗರಿಬೊಮ್ಮನಹಳ್ಳಿ ನಿಲ್ದಾಣಕ್ಕೆ ಆಗಮಿಸುತಿದ್ದಂತೆ ರೈಲು ಹೋರಾಟ ಸಮಿತಿಯವರು ಪೂಜೆ ಸಲ್ಲಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಸಮಿತಿ ಸಂಚಾಲಕರಾದ ಕೊಟ್ರೇಶ ಶೆಟ್ಟರ್, ಎಚ್.ಸತ್ಯನಾರಾಯಣ, ಫೋಟೋ ರಾಮಣ್ಣ, ಜಿ.ಲಕ್ಷ್ಮೀಪತಿ, ನೀಲಂಕಠಪ್ಪ, ಕೈಲಾಸ್, ಸತೀಶ್ ಪಾಟೀಲ್, ಕೆ.ಪಿ.ದೇವರಾಜ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ ಇತರರಿದ್ದರು. 
ಬಳ್ಳಾರಿ

ಹೊಸಪೇಟೆ-ಅರಸಿಕೆರೆ ರೈಲು ಸಂಚಾರ ಪ್ರಾರಂಭ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಹ.ಬೊ.ಹಳ್ಳಿ ಮತ್ತು ಹಂಪಾಪಟ್ಟಣದಲ್ಲಿ ಅದ್ಧೂರಿ ಸ್ವಾಗತ

ಹಗರಿಬೊಮ್ಮನಹಳ್ಳಿ: ಹೊಸಪೇಟೆ-ಅರಸಿಕೆರೆ ಪ್ರಯಾಣಿಕರ ರೈಲು ಶುಕ್ರವಾರದಿಂದ ಸಂಚಾರ ಆರಂಭಿಸಿದ್ದು, ಪಟ್ಟಣ ಹಾಗೂ ತಾಲೂಕಿನ ಹಂಪಾಪಟ್ಟಣದಲ್ಲಿ ಪ್ರಯಾಣಿಕರು ಮತ್ತು ರೈಲು ಹೋರಾಟ ಸಮಿತಿಯವರು ನಂದಿಪುರ ಶ್ರೀ ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಅದ್ದೂರಿ ಸ್ವಾಗತ ಮಾಡಿಕೊಂಡರು.

ಸಮಿತಿ ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ, ಹೊಸಪೇಟೆ-ಅರಸಿಕೆರೆ ಡೆಮೋ ರೈಲು ಸಂಚಾರದಿಂದ ಹರಿಹರ, ದಾವಣಗೆರೆ ಹಾಗೂ ಧರ್ಮಸ್ಥಳಕ್ಕೆ ಹೋಗಿಬರುವವರಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಕಡೆಗೆ ಸಂಚರಿಸುವ ರೈಲು ಹಂಪಾಪಟ್ಟಣದಲ್ಲಿ ನಿಲ್ಲಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದರು.
ಜಿಪಂ ಮಾಜಿ ಸದಸ್ಯ ಎಚ್.ಭೀಮಪ್ಪ, ರಾಜ್ಯ ಕಾ.ನಿ.ಪ.ಸಂಘದ ಜಿಲ್ಲಾ ಸದಸ್ಯ ಸಿ.ಶಿವಾನಂದ, ಗ್ರಾಪಂ ಅಧ್ಯಕ್ಷೆ ಪತ್ರಿ ಗೀತಾ, ಸದಸ್ಯರಾದ ಸಿ.ಎಲ್.ಕುಮಾರ್, ಎನ್ನ ನಾಗರಾಜ್, ಬಿ.ನಾಗರಾಜ್, ಎಸ್. ಗಾಳಪ್ಪ ಇತರರಿದ್ದರು.