ಕಂಪ್ಲಿಯಲ್ಲಿ ರುಕ್ಮಿಣಿ ಸತ್ಯಭಾಮಸಹಿತ ಶ್ರೀ ಕೃಷ್ಣ ಕಲ್ಯಾಣೋತ್ಸವ ಹಾಗೂ ಭಗವದ್ಗೀತ ಹೋಮ ನಡೆಯಿತು.
ಕಂಪ್ಲಿ: ಲೋಕ ಕಲ್ಯಾಣ ಹಾಗೂ ಧನುರ್ಮಾಸ ಪ್ರಯುಕ್ತ ಪಟ್ಟಣದ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಗೀತಾ ಭಜನಾ ಮಂಡಳಿಯಿಂದ ಶುಕ್ರವಾರ ರುಕ್ಮಿಣಿ ಸತ್ಯಭಾಮಸಹಿತ ಶ್ರೀ ಕೃಷ್ಣ ಕಲ್ಯಾಣೋತ್ಸವ ಹಾಗೂ ಭಗವದ್ಗೀತಾ ಪಾರಾಯಣ ಸಹಿತ ಹೋಮ ಕಾರ್ಯಕ್ರಮ ನಡೆಯಿತು.
ಅರ್ಚಕ ಕಿಶೋರಾಚಾರ್ ಪೌರೋಹಿತ್ಯದಲ್ಲಿ ಕಲ್ಯಾಣೋತ್ಸವ, ಹೋಮ, ಪುಣ್ಯಾಹವಾಚನ, ಗಣಪತಿ, ನವಗ್ರಹ ಪೂಜೆ, ಅನ್ನಸಂತರ್ಪಣೆ ನಡೆದವು. ಮಂಡಳಿ ಅಧ್ಯಕ್ಷೆ ಟಿ.ರಮಾ ವೆಂಕಟರಮಣ ಮಾತನಾಡಿ, ಸಮೃದ್ಧ ಮಳೆ-ಬೆಳೆ, ಸರ್ವ ಜೀವ ಸಂಕುಲದ ಶಾಂತಿ- ಸಮಾಧಾನಕ್ಕಾಗಿ ಸಂಕಲ್ಪಿಸಿ ಹೋಮ, ಕಲ್ಯಾಣೋತ್ಸವ ಆಯೋಜಿಸಲಾಗಿತ್ತು ಎಂದರು.
ಪದಾಧಿಕಾರಿಗಳಾದ ಎಚ್.ಎನ್.ಧನಲಕ್ಷ್ಮೀ ನಟರಾಜ, ರಾಧಾಬಾಯಿ ಶ್ರೀನಿವಾಸ, ಜಿ.ಶಶಿರೇಖಾ ಯಲ್ಲಣ್ಣ ಶ್ರೇಷ್ಠಿ, ಸರಿತಾ ಮುರುಳಿ, ಟಿ.ಸುಪ್ರಿಯಾ ನಾಗೇಶ್ವರರಾವ್, ಉಷಾ ನಿರಂಜನ, ಬಿ.ಸುನೀತಾ ಬಸಪ್ಪ, ಇ.ಲತಾ ಪದ್ಮನಾಭ, ಇ.ಭಾರತಿ ಶ್ರೀಧರ, ಆರ್ಯವೈಶ್ಯ ಸಮುದಾಯದವರಿದ್ದರು.