ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಬೆಂಬಲಿಗರು ಹಾಗೂ ಮುಖಂಡರು ಮಳೆಗಾಗಿ ಹೋಮ ಸುಡಿಸಿದರು. ಮೇಯರ್ ಪಿ.ಗಾದೆಪ್ಪ, ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ವೀರೇಶ್, ನಾಗರಾಜ, ಅನುಮೇಶಿ ಇತರರಿದ್ದರು. ===
ಬಳ್ಳಾರಿ : ಜಿಲ್ಲಾದ್ಯಂತ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆ ಮಾಜಿ ಸಚಿವ ಬಿ.ನಾಗೇಂದ್ರ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರು ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ವರುಣ ಯಾಗ ಮತ್ತು ಹೋಮ ಹವನ ನಡೆಸಿದರು.
ದೇವಸ್ಥಾನದಲ್ಲಿ ಗಣಪತಿ, ನವಗ್ರಹ ಹೋಮ ಹಾಗೂ ವರುಣಯಾಗವನ್ನು ನಡೆಸಲಾಯಿತು. ಯಾಗಕ್ಕೂ ಮುನ್ನ ದುರ್ಗಮ್ಮ ದೇವಿಗೆ ಅಭಿಷೇಕ, ಕುಂಕುಮಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ರೈತರು, ಮಾಜಿ ಸಚಿವ ಬಿ.ನಾಗೇಂದ್ರ ಅವರ ಬೆಂಬಲಿಗರು ಹಾಗೂ ಭಕ್ತರು ಯಾಗದಲ್ಲಿ ಭಾಗವಹಿಸಿ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಲಿ, ರೈತರ ಬೆಳೆ ಸಮೃದ್ಧವಾಗಿ, ರಾಜ್ಯದಲ್ಲಿ ಸುಭಿಕ್ಷ ನೆಲೆಸಲಿ ಎಂದು ಪ್ರಾರ್ಥಿಸಿದರು..