ಕಂಪ್ಲಿಯಲ್ಲಿ ರೈತ ಸಂಘದವರು ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸೋಮವಾರ ಸಲ್ಲಿಸಿದರು. ಪ್ರಮುಖರಾದ ಬಿ.ವಿ.ಗೌಡ, ವಿ.ವೀರೇಶ್, ಎನ್.ತಿಮ್ಮಪ್ಪನಾಯಕ, ಕಾಗೆ ಈರಣ್ಣ ಇತರರಿದ್ದರು. 
ಬಳ್ಳಾರಿ

ಕಾಲುವೆಗಳಿಗೆ ನೀರು ಹರಿಸದಿದ್ದರೆ ಹೈವೆ ಬಂದ್

ಕುರುವತ್ತಿ ಶ್ರೀಕಾಂತಪ್ಪ

ಕಂಪ್ಲಿ: ಎಲ್‌ಎಲ್ ಮತ್ತು ಎಚ್‌ಎಲ್ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಸೋಮವಾರ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಎಲ್‌ಎಲ್ ಮತ್ತು ಎಚ್‌ಎಲ್ ಕಾಲುವೆಗಳಿಗೆ ಕರ್ನಾಟಕ-ಆಂಧ್ರ ಪಾಲಿನ 1800 ಕ್ಯೂಸೆಕ್ ನೀರು ಹರಿಸಬೇಕು. ನೀರಿಲ್ಲದೆ ಸಸಿ ಮಡಿಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನೀರು ಹರಿಸುವುದಾಗಿ ಭರವಸೆ ನೀಡಿ ಇನ್ನೂ ಕ್ರಮಕೈಗೊಂಡಿಲ್ಲ. ದಿನೇದಿನೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ಕಾಲುವೆ ಅಚ್ಚುಕಟ್ಟು ರೈತರೊಂದಿಗೆ ಆ.19ರಂದು ತುಂಗಭದ್ರಾ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ವಿ.ವೀರೇಶ್, ಎನ್.ತಿಮ್ಮಪ್ಪನಾಯಕ, ಕಾಗೆ ಈರಣ್ಣ, ಚಿನ್ನಬಾಬು, ಶಿವಜಾತ, ಟಿ.ಗಂಗಣ್ಣ, ಕೆ. ಶ್ರೀನಿವಾಸುಲು, ಕೃಷ್ಣಂರಾಜು ಇತರರಿದ್ದರು.