ಪೌರ ಕಾರ್ಮಿಕ ಆತ್ಮಹತ್ಯೆಗೆ ಯತ್ನ 
ಬಳ್ಳಾರಿ

ಮೇಲಾಧಿಕಾರಿ ಕಿರುಕಳ, ಪೌರ ಕಾರ್ಮಿಕ ಆತ್ಮಹತ್ಯೆಗೆ ಯತ್ನ

ಪ್ರಮುಖ ಮುಖ್ಯಾಂಶಗಳು

  • ಮೇಲಾಧಿಕಾರಿ
  • ಕಿರುಕಳ
  • ಆತ್ಮಹತ್ಯೆ
ಬಳ್ಳಾರಿ : ಸಿರಗುಪ್ಪ ನಗರಸಭೆಯ ಪೌರಕಾರ್ಮಿಕಯೊಬ್ಬ ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು, ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ನಗರಸಭೆ ಸಿಬ್ಬಂದಿ ಮುರಳೀಶ ಆತ್ಮಹತ್ಯೆಗೆ ಯತ್ನಿಸಿದವ. ನಿತ್ಯ ಕೆಲಸಕ್ಕೆ ಹಾಜರಾದರು ಸರಿಯಾಗಿ ಹಾಜರಾತಿ ನೀಡದೆ ಹಾಗೂ ಪ್ರತಿ ತಿಂಗಳ ವೇತನ ನಿಗದಿತ ವೇಳೆ ಪಾವತಿಸದಕ್ಕೆ ಮೇಲಧಿಕಾರಿಗಳ ವಿರುದ್ಧ ಬೇಸತ್ತು ಆತ್ಮಹತ್ಯೆ ಯತ್ನಿಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಸದ್ಯ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುರಳೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮತ್ತು ನಗರಸಭೆ ಪೌರಾಯುಕ್ತರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುಣಮುಖರಾದ ನಂತರ ವಿಚಾರಿಸಿ, ಪ್ರಕರಣ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಗಂಗಾಧರ ತಿಳಿಸಿದ್ದಾರೆ.