ಕಣವಿ ತಿಮ್ಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊಠಡಿ ನಿರ್ಮಾಣಕ್ಕೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಚಾಲನೆ ನೀಡಿದರು. ಪ್ರಮುಖರಾದ ಎನ್.ವಿಶ್ವನಾಥ, ಪರಶುರಾಮ ಪವಾರ್, ಓರವಾಯಿ ತಿಮ್ಮಣ್ಣ, ನೇಣ್ಕಿ ಗಿರೀಶ್ ಇತರರಿದ್ದರು.
ಕಂಪ್ಲಿ: ಅರ್ಹರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈಬಿಡುವುದಿಲ್ಲ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಹೇಳಿದರು.
ಹೊನ್ನಳ್ಳಿ ಗ್ರಾಮದಲ್ಲಿ ರಾಜ್ಯ ಹಣಕಾಸು ಆಯೋಗದ 15 ಲಕ್ಷ ರೂ. ವೆಚ್ಚದಲ್ಲಿ 2ನೇ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಯಥಾವತ್ತಾಗಿ ಮುಂದುವರಿಯಲಿವೆ. ಫಲಾನುಭವಿಗಳು ಆತಂಕಪಡಬಾರದು ಎಂದರು.
ಕೆ.ಎನ್.ಕ್ಯಾಂಪಿನ ನಿವಾಸಿಗಳು, ವಸತಿ ಯೋಜನೆಯ ಹಣ ಬಿಡುಗಡೆಗೊಂಡಿಲ್ಲ. ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಕಣಿವೆ ತಿಮ್ಮಾಪುರದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸಹಿಪ್ರಾಶಾಲೆ ಆವರಣದಲ್ಲಿ ಕೊಠಡಿ ನಿರ್ಮಾಣ, ರೆಗ್ಯುಲೇಟರ್ ಕ್ಯಾಂಪಿನಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ, ಕೆ.ಎನ್.ಕ್ಯಾಂಪ್ ಸಕಿಪ್ರಾಶಾಲೆ ಆವರಣದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ, ದೇವಸಮುದ್ರ ಗ್ರಾಮದಲ್ಲಿ 22 ಲಕ್ಷ ರೂ. ಮೊತ್ತದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ, 12 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಔಷಧ ದಾಸ್ತಾನು ಕೊಠಡಿ, ಎಮ್ಮಿಗನೂರು ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ಕಟ್ಟಡ ನಿರ್ಮಾಣ ಸೇರಿದಂತೆ 1.16 ಕೋಟಿ ರೂ. ಮೊತ್ತದ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮುಖ್ಯಶಿಕ್ಷಕ ವಿಶ್ವನಾಥ, ಪ್ರಮುಖರಾದ ನೇಣ್ಕಿ ಗಿರೀಶ್, ಪರಶುರಾಮ, ಓರವಾಯಿ ತಿಮ್ಮಣ್ಣ, ವೆಂಕೋಬ ನಾಯಕ, ಕೋರಿ ಚನ್ನಬಸವ, ಬಸವರಾಜ, ರಮೇಶ, ಪಂಪಾಪತಿ, ಗಂಗಪ್ಪ, ರಾಮಲಿಸ್ವಾಮಿ, ದೇವಣ್ಣ, ನಾಗಭೂಷಣ, ಸುಭಾನಿ ಇತರರಿದ್ದರು.