ಸಂಡೂರು ತಾಲೂಕಿನ ಮಟ್ಟಜನಹಳ್ಳಿ ಗ್ರಾಮದಲ್ಲಿ ಜಿಪ್ಸಮ್ ಮತ್ತು ಸೂಕ್ಷ್ಮಪೋಷಕಾಂಶಗಳನ್ನು ಜಮೀನಿನಲ್ಲಿ ಬಳಸುವ ಕುರಿತು ಹಿರಿಯ ವಿಜ್ಞಾನಿ ಡಾ.ಎಂ.ಎನ್.ರಮೇಶ್ ಅವರು ಪ್ರಾತ್ಯಕ್ಷಿಕೆ ನೀಡಲಾಯಿತು. ವಿಜ್ಞಾನಿಗಳಾದ ಡಾ.ಮಹಿಪಾಲ್ ಚೌಧರಿ, ಡಾ.ರವಿ ಡುಪಾಲ್ಡ್, ಡಾ.ಕವಿತಾ ಪಿ.ಜಣಧವ್ ಇತರರಿದ್ದರು. 
ಬಳ್ಳಾರಿ

ವೈವಿಧ್ಯಮಯ ಬೆಳೆ ಬೆಳೆಯಿರಿ

ಪ್ರಮುಖ ಮುಖ್ಯಾಂಶಗಳು

  • ವೈವಿಧ್ಯಮಯ
ಬಳ್ಳಾರಿ : ಪಶುಪಾಲನೆ, ಹಸಿರು ಎಲೆ ಗೊಬ್ಬರ ಮತ್ತು ಕೃಷಿ ಅರಣ್ಯ ವ್ಯವಸ್ಥೆಗಳು ರೈತರಿಗೆ ಹೆಚ್ಚುವರಿ ಆದಾಯ ನೀಡುವುದಲ್ಲದೆ, ಹವಾಮಾನ ವೈಪರೀತ್ಯ ಎದುರಿಸಲು ಶಕ್ತಿ ನೀಡುತ್ತವೆ ಎಂದು ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಎಂ.ಎನ್.ರಮೇಶ್ ಹೇಳಿದರು.
ಸಂಡೂರು ತಾಲೂಕಿನ ಮಟ್ಟಜನಹಳ್ಳಿ ಗ್ರಾಮದಲ್ಲಿ ಪ್ರಾದೇಶಿಕ ಕೇಂದ್ರದ ಐಸಿಎಆರ್-ಐಐಎಸ್‌ಡಬ್ಲ್ಯೂಸಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಣ್ಣಿನ ಆರೋಗ್ಯ ಚೇತನಕ್ಕಾಗಿ ವೈವಿಧ್ಯಮಯ ಬೆಳೆ ವ್ಯವಸ್ಥೆಗಳು ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಸಾವಯವ ಗೊಬ್ಬರ ತಯಾರಿಸುವುದು ಮತ್ತು ಬೆಳೆ ಅವಶೇಷಗಳನ್ನು ಸುಡದೆ ಮಣ್ಣಿನಲ್ಲಿ ಸೇರಿಸುವುದರಿಂದ ಮಣ್ಣಿನ ಆರೋಗ್ಯಕ್ಕೆ ಪೂರಕ ಹವಾಮಾನ ವೈಪರೀತ್ಯ ಎದುರಿಸಲು ಶಕ್ತಿ ನೀಡುತ್ತವೆ ಎಂದರು.
ರೈತರು ಏಕಬೆಳೆ ಪದ್ಧತಿಯಿಂದ ಹೊರ ನಡೆದು ವೈವಿಧ್ಯಮಯ ಬೆಳೆಗಳ ಬೆಳೆಯುವುದರಿಮದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳವುದು ಸುಲಭ ಎಂದು ಸಲಹೆ ನೀಡಿದರು.
ಹಿರಿಯ ವಿಜ್ಞಾನಿ ಡಾ.ಮಹಿಪಾಲ್ ಚೌಧರಿ ಮಾತನಾಡಿ, ಮಣ್ಣು ಪರೀಕ್ಷೆಯಿಂದ ಅಗತ್ಯ ಪ್ರಮಾಣದ ಸರಿಯಾದ ವಿಧಾನದಿಂದ ರಸಗೊಬ್ಬರ ಬಳಸಬಹುದು ಎಂದರು.
===