ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಸಂಸ್ಥೆಯಿಂದ ಆಯೋಜಿಸಿದ್ದ ಡಾ.ಜೋಳದರಾಶಿ ದೊಡ್ಡನಗೌಡರ 31ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯಾಕಾರಿಣಿ ಸದಸ್ಯ ಕೆ.ಪೊಂಪನಗೌಡ ಉದ್ಘಾಟಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಕೆ.ಚನ್ನಪ್ಪ, ಕೆ.ಕೊಟೇಶ್ವರಾವ್, ಎನ್.ಪ್ರಕಾಶ್, ರಮೇಶಗೌಡ, ರಮಣಪ್ಪ ಭಜಂತ್ರಿ, ಪಿ.ಧನಂಜಯ, ಬಾಸ್ಕರ್ ನಾಯ್ಡು ಇತರರಿದ್ದರು.
* ಸದಸ್ಯ ಕೆ.ಪೊಂಪನಗೌಡ ಹೇಳಿಕೆ
ಬಳ್ಳಾರಿ : ದಿವಂಗತ ಡಾ.ಜೋಳದರಾಶಿ ದೊಡ್ಡನಗೌಡರ ಅವರು ಪೌರಾಣಿಕ ನಾಟಕಗಳ ಪಾತ್ರಗಳಲ್ಲಿ ಅಭಿನಿಯಸುವ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಸಂಸ್ಥೆಯ ಕಾರ್ಯಾಕಾರಿಣಿ ಸದಸ್ಯ ಕೆ.ಪೊಂಪನಗೌಡ ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ಸಂಸ್ಥೆಯಿಂದ ಆಯೋಜಿಸಿದ್ದ ಡಾ.ಜೋಳದರಾಶಿ ದೊಡ್ಡನಗೌಡರ 31ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇವಲ ನಾಟಕದಲ್ಲಿ ಮಾತ್ರ ಆಸಕ್ತಿವಹಿಸದೆ, ಸಾಹಿತ್ಯಕ್ಕೂ ಹೆಚ್ಚು ಒತ್ತು ನೀಡಿದ್ದರಿಂದ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರು ಬಳ್ಳಾರಿ ರಾಘವ ಅವರ ಮೆಚ್ಚಿನ ಶಿಷ್ಯರಾಗಿದ್ದರು ಎಂದು ಸ್ಮರಿಸಿದರು.