ಕಂಪ್ಲಿಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಜೆ.ಎನ್.ಗಣೇಶ್, ಬಿಇಒ ಟಿ.ಎಂ.ಸಿದ್ಧಲಿಂಗಮೂರ್ತಿ, ಪ್ರಮುಖರಾದ ಹನುಮಂತಪ್ಪ, ಟಿ.ಎಂ.ಬಸವರಾಜ, ಮಂಜುನಾಥ, ಪಿ.ನಾಗೇಶ್ವರರಾವ್, ಉಗಾದಿ ಶಿವರಾಜ ಇತರರಿದ್ದರು. 
ಬಳ್ಳಾರಿ

ನಿವೇಶನ ಪಡೆದರೆ ಅನುದಾನ ಬಿಡುಗಡೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅನುದಾನ
  • ಶಾಸಕ ಜೆ.ಎನ್.ಗಣೇಶ್

ನಿವೇಶನ ಪಡೆದರೆ ಅನುದಾನ ಬಿಡುಗಡೆ

ಕಂಪ್ಲಿ: ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಿಸಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ನಗರದ ವೀರಶೈವ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ, ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಬಿಇಒ ಕಚೇರಿ ಆರಂಭಿಸಲು ಅಗತ್ಯ ಅಂಕಿ-ಅಂಶ, ಮಾಹಿತಿ ನೀಡಿ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದೇನೆ. ಯಾವಾಗಲಾದರೂ ಬಿಇಒ ಕಚೇರಿ ಆರಂಭಗೊಳ್ಳಬಹುದು ಎಂದರು.
ಗುರುಭವನ, ನೌಕರರ ಭವನಗಳಿಗೆ ನೀವು ನಿವೇಶನ ಪಡೆದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಒಪಿಎಸ್ ಅನುಷ್ಠಾನ ಸೇರಿದಂತೆ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನಕ್ಕೆ ತರುವಲ್ಲಿ ಸದಾ ಶ್ರಮಿಸುತ್ತೇನೆ. ಎಮ್ಮಿಗನೂರು, ದೇವಸಮುದ್ರಕ್ಕೆ ಕೆಪಿಎಸ್ ಶಾಲೆ ಮಂಜೂರಾಗಿದ್ದು, ಕ್ಷೇತ್ರದಲ್ಲಿ ಇನ್ನೂ 4 ಕೆಪಿಎಸ್ ಶಾಲೆ ಮಂಜೂರಾಗಲಿವೆ. ಸಿಎಸ್‌ಆರ್, ಡಿಎಂಎಫ್ ಅನುದಾನದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಿಸಬೇಕು. ಗುರುಭವನಕ್ಕಾಗಿ ನಿವೇಶನ ಒದಗಿಸಬೇಕು. ಕಾಯಂ ಶಿಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು ಎಂದು ಒತ್ತಾಯಿಸಿದರು.
ನಿವೃತ್ತ ಹಾಗೂ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿಇಒ ಟಿ.ಎಂ.ಸಿದ್ಧಲಿಂಗಮೂರ್ತಿ, ಅಧಿಕಾರಿಗಳಾದ ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ, ಮನೋಹರ, ಎಚ್.ದೊಡ್ಡಬಸಪ್ಪ, ಟಿ.ಎಂ.ಬಸವರಾಜ, ಮಂಜುನಾಥ, ಸುನಿತಾ ಪೂಜಾರ, ನಿಂಗಪ್ಪ, ಟಿ.ಪಂಪಾಪತಿ, ಅಂಬಿಗರ ಮಂಜುನಾಥ, ಎಂ.ರೇವಣ್ಣ, ಸುಗ್ಗೇನಹಳ್ಳಿ ರಮೇಶ್ ಇತರರಿದ್ದರು.