ಸಂಡೂರು ತಾಲೂಕು ಸುಶೀಲಾನಗರ ಗ್ರಾಪಂ ವ್ಯಾಪ್ತಿಯ ಜಯಸಿಂಗಪುರ ಗ್ರಾಮದಲ್ಲಿ ಗ್ರಾಪಂ ಸದಸ್ಯರ ಸ್ಥಾನದ ಮೀಸಲಾತಿ ಕುರಿತು ಆಕ್ಷೇಪಣೆ ಸಲ್ಲಿಸಲು ಗ್ರೇಡ್-2 ತಹಸೀಲ್ದಾರ್ ಸುಧಾ ಆರಮನೆಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ವಿ.ಎಸ್.ಶಂಕರ್, ಗ್ರಾಮದ ಎಂ.ಗೋಪಾಲರಾವ್, ಕರಣಜ್ಜ, ಎಚ್.ಚನ್ನಬಸಪ್ಪ, ಮಾರೆಪ್ಪ, ಚನ್ನಪ್ಪ, ಎಚ್.ದಾನಪ್ಪ, ಎನ್.ರಮೇಶ, ಡಿ.ಓಂಕಾರೇಶ್, ಎನ್.ಬಾಲಪ್ಪ, ತಿಪ್ಪೇಸ್ವಾಮಿ, ರಾಯಣ್ಣ, ಆನಂದರಾವ್ ಇತರರಿದ್ದರು.  
ಬಳ್ಳಾರಿ

‘ಗ್ರಾಪಂ ಮೀಸಲು ಸ್ಥಾನ’ ಆಕ್ಷೇಪಣೆ ಸಲ್ಲಿಸಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಗ್ರೇಡ್-2 ತಹಸೀಲ್ದಾರ್‌ಗೆ ಜಯಸಿಂಗಪುರ ಗ್ರಾಮಸ್ಥರ ಮನವಿ

ಸಂಡೂರು:

ಸುಶೀಲಾನಗರ ಗ್ರಾಪಂ ವ್ಯಾಪ್ತಿಯ ಜಯಸಿಂಗಪುರ ಗ್ರಾಮದಲ್ಲಿ ಗ್ರಾಪಂ ಸದಸ್ಯರ ಸ್ಥಾನದ ಮೀಸಲಾತಿ ಕುರಿತು ಆಕ್ಷೇಪಣೆ ಸಲ್ಲಿಸಲು ಗ್ರೇಡ್-2 ತಹಸೀಲ್ದಾರ್ ಸುಧಾ ಆರಮನೆಗೆ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು.

ಪ್ರಮುಖ ಪಿ.ತಾಯಪ್ಪ ನಾಯಕ ಮಾತನಾಡಿ, ಜಯಸಿಂಗಪುರದಲ್ಲಿ ಎಸ್ಸಿ ಪುರುಷ ಹಾಗೂ ಮಹಿಳೆಯರು ಸೇರಿ 244, ಎಸ್ಟಿ 318, ಸಾಮಾನ್ಯ 559, ಅಲ್ಪಸಂಖ್ಯಾತರು 73 ಇದ್ದಾರೆ. ಕಳೆದ ಬಾರಿ ಗ್ರಾಪಂ ಸ್ಥಾನದ ಕರಡು ಅಧಿಸೂಚನೆಯಲ್ಲಿ ಗ್ರಾಮದ ನಾಲ್ಕು ಎಸ್ಸಿ (ಅನುಸೂಚಿತ ಮಹಿಳೆ-2, ಅನುಸೂಚಿತ ಜಾತಿ 2) ಸ್ಥಾನಗಳಿಗೆ ಮೀಸಲಾತಿ ಕಲಿಸಲಾಗಿತ್ತು.
ಈ ಬಾರಿಯೂ ಸಹ ಗ್ರಾಮದ ನಾಲ್ಕು ಸ್ಥಾನಗಳಿಗೆ ಎಸ್ಸಿ ಮೀಸಲಾತಿ ಎಂದು ನಿಗದಿ ಪಡಿಸಲಾಗಿದೆ ಎಂಬ ಮಾಹಿತಿಯಿದೆ. ಆದ್ದರಿಂದ ಸಾಮಾಜಿಕ ನ್ಯಾಯದಡಿ ಸ್ಥಾನ ಕಲ್ಪಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.