ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘಟನೆ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು. ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ, ಪದಾಧಿಕಾರಿಗಳಾದ ವೀರೇಶ್, ಅಮರೇಶ್, ಲಿಂಗಮೂರ್ತಿ, ಕಾರಮಂಚಿ, ಮಹೇಶ್ ಇತರರಿದ್ದರು.
ಬಳ್ಳಾರಿ : ಸರ್ಕಾರಿ ಯೋಜನೆಯ ಹಣ ರೈತರ ಖಾತೆಗಳಿಗೆ ಜಮೆಯಾದ ಕೂಡಲೇ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವುದು ವಿರೋಧಿಸಿ, ಇಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘಟನೆ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಯಿತು.
ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಗೆ ಒಟಿಎಸ್ ಪದ್ಧತಿಯಲ್ಲಿ ಸಾಲ ತಿರುವಳಿ ಮಾಡಿ ಹೊಸ ಸಾಲ ವಿತರಿಸುತ್ತಿದ್ದಾರೆ. ಆದರೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಒಟಿಎಸ್ ಪದ್ಧತಿಯಲ್ಲಿ ಸಾಲ ತಿರುವಳಿ ಮಾಡಲು ಮೀನಾಮೇಷ ತೋರುತ್ತಿರುವ ಜತೆಯಲ್ಲ ಕಿರುಕುಳ ನೀಡುತ್ತಿದೆ ಎಂದರು.
ಕೃಷಿ ಸಾಲ ತಿರುವಳಿ ಮಾಡಿದ ರೈತರಿಗೆ ಹೊಸ ಸಾಲ ತಿರುವಲಿ ಮಾಡಿದ್ದಕ್ಕಿಂತ ಶೇ. 25ರಷ್ಟು ಹೆಚ್ಚಿನ ಸಾಲ ನೀಡಬೇಕು. ಈಗಾಗಲೇ ಬ್ಯಾಂಕ್ ನೌಕರರು ಹೊಸ ಟ್ರಾೃಕ್ಟರ್‌ಗೆ ಸಾಲ ನೀಡುವುದಾಗಿ ರೈತರಿಗೆ ನಂಬಿಸಿ, ಹಳೆ ಟ್ರಾೃಕ್ಟರ್ ಪಡೆದು ಈವರೆಗೆ ಸಾಲ ವಿತರಿಸಿಲ್ಲ ಇದರ ಬಗ್ಗೆಯೂ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.