ಕಂಪ್ಲಿಯಲ್ಲಿ ಪತಂಜಲಿ ಯೋಗ ಸಮಿತಿಯಿಂದ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಎಸ್.ಶ್ರೀಧರ ಯೋಗಾಭ್ಯಾಸ ಮಾಡಿಸಿದರು.
ಕಂಪ್ಲಿ: ಗುರು-ಹಿರಿಯರ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಭವಿಷ್ಯ ಸಾಧ್ಯ ಎಂದು ಕಮ್ಮರಚೇಡಿನ ಕಲ್ಯಾಣಸ್ವಾಮಿ ಸಂಸ್ಥಾನಮಠದ ಕಲ್ಯಾಣ ಸ್ವಾಮೀಜಿ ಹೇಳಿದರು.
ಪಟ್ಟಣದ ಶಾರದಾ ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಆಯೋಜಿಸಿದ್ದ ಸಾಮೂಹಿಕ ಯೋಗ ಶಿಬಿರಕ್ಕೆ ಚಾಲನೆ ನೀಡಿ, ಉತ್ತಮ ಜೀವನಕ್ಕೆ ಆರೋಗ್ಯದೊಂದಿಗೆ ಉತ್ತಮ ಮೌಲ್ಯಗಳು ಅಗತ್ಯ ಎಂದರು.
ಯೋಗ ಶಿಕ್ಷಕ ಎಸ್.ಶ್ರೀಧರ ಯೋಗಾಭ್ಯಾಸ ಮಾಡಿಸಿ, ಪ್ರಸ್ತುತ ಆಹಾರ, ಗಾಳಿ, ನೀರು ಕಲುಷಿತಗೊಂಡಿದ್ದು ಬಾಹ್ಯವಾಗಿ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿವೆ. ಆಧುನಿಕ ಜೀವನ ಪದ್ಧತಿ ಮನಸ್ಸು, ದೇಹದ ಮೇಲೆ ಅನಾರೋಗ್ಯ ಬೀರುತ್ತಿದೆ. ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮಗಳೊಂದಿಗೆ ಉತ್ತಮ ಆಹಾರ ಪದ್ಧತಿ, ಜೀವನ ಶೈಲಿ, ಆರೋಗ್ಯಕರ ಮಾನಸಿಕ ಸ್ಥಿತಿಯನ್ನು ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು.
ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಮಕ್ಕಳು, ಮಹಿಳೆಯರು ಹಾಡು, ನೃತ್ಯ, ನಾಟಕ ಪ್ರದರ್ಶಿಸಿದರು. ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ, ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರಿ ಡಿ.ಮೌನೇಶ್, ಕಾರ್ಯದರ್ಶಿ ಷಣ್ಮುಖಪ್ಪ ಚಿತ್ರಗಾರ, ಮಹಿಳಾ ಪ್ರಭಾರಿ ರತ್ನಮ್ಮ ಕಲ್ಗುಡಿ, ಯೋಗ ಸಾಧಕರಾದ ಕಾರೇಮಂಗಿ ತಿಪ್ಪೇಸ್ವಾಮಿ, ರಾಜಾರಾಮ್ ಚಿತ್ರಗಾರ್, ಕಿಶೋರ್, ಯಣ್ಣಿ ಚಂದ್ರಮೋಹನ, ವಿಶ್ವನಾಥರಾಜು, ರಾಮರಾಜು, ಶ್ರೀನಿವಾಸ, ನಾಗರತ್ನ ಕಲ್ಗುಡಿ, ಭವಾನಿ, ಉಮಾದೇವಿ, ನಿರ್ಮಲಾ, ರುದ್ರಮ್ಮ ಇತರರಿದ್ದರು.