ಸಂಡೂರಿನ ಸ್ವಾಮಿಹಳ್ಳಿಯಲ್ಲಿ ಡಿಎಸ್‌ಎಸ್ ಗ್ರಾಮ ಘಟಕದ ವತಿಯಿಂದ ಆಯೋಜಿಸಿದ್ದ ಡಾ.ಬಾಬುಜಗಜೀವನರಾಮ್ ಹಾಗೂ ಡಾ.ಬಿ.ಆರ್.ಆಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಶುಕ್ರವಾರ ಸನ್ಮಾನಿಸಲಾಯಿತು. 
ಬಳ್ಳಾರಿ

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

ಅಶೋಕ್ ಕುಮಾರ್ ಎನ್
ಸಂಡೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಕೋಟ್ಯಂತರ ಶೋಷಿತರಿಗೆ ಸಂವಿಧಾನಬದ್ಧವಾಗಿ ಮೀಸಲಾತಿ ಕಲ್ಪಿಸಿದರು ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್ ಹೇಳಿದರು.
ತಾಲೂಕಿನ ಸ್ವಾಮಿಹಳ್ಳಿಯಲ್ಲಿ ಡಿಎಸ್‌ಎಸ್ ಗ್ರಾಮ ಘಟಕ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಹಾಗೂ ಡಾ.ಬಿ.ಆಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಅಂಬೇಡ್ಕರ್ ಶೋಷಿತರಾಗಿ ಅನೇಕ ಪಡಿಪಾಟಲು ಪಟ್ಟಿದ್ದಾರೆ ಎಂದರು.
ರಾಜ್ಯ ಖನಿಜ ಅಬಿವೃದ್ಧಿ ನಿಗಮದ ಉಪಾಧ್ಯಕ್ಷ ತುಮಟಿ ಲಕ್ಷ್ಮಣ ಮಾತನಾಡಿ, ಎಸ್ಸಿ, ಎಸ್ಟಿ ಜನರು ಸಾಲ ಮಾಡಿ ಜಾತ್ರೆಗಳನ್ನು ಮಾಡುವ ಮೂಲಕ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ಬದಲಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಗೋವರ್ಧನ್, ಮಾಜಿ ಸಂಚಾಲಕ ರಾಮಕೃಷ್ಣ ಹೆಗಡೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ನಟರಾಜ್, ರಾಜಣ್ಣ, ಐಹೊಳೆ ನಿಂಗಪ್ಪ, ದುರುಗಣ್ಣ, ಹೊಸಳ್ಳಿ ತಾಯಪ್ಪ, ಎಚ್.ಮರಿಸ್ವಾಮಿ, ಹನುಮಂತರೆಡ್ಡಿ, ಮಲ್ಲೇಶ್ ಕಮ್ಮತ್ತೂರು, ವೈಟಿಜಿ ಕುಮಾರ್, ಸುಬ್ಬಣ್ಣ ಬಜಲಿ, ಗಂಗಪ್ಪ ಹೊಸಳ್ಳಿ, ದೇವರಾಜ್, ದೇವೇಂದ್ರಪ್ಪ, ಬಸವರಾಜ್ ಬ್ರೂಸ್ಲಿ, ಪಂಪಣ್ಣ ಬನ್ನಿಹಟ್ಟಿ, ಬೆಟ್ಟಪ್ಪ ದರೋಜಿ, ಶಿವಕುಮಾರ್ ಮುಂತಾದವರಿದ್ದರು.