ಕಂಪ್ಲಿಯಲ್ಲಿ ಆಯೋಜಿಸಿದ್ದ ರೇಬಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯೆ ಹಾರಿಕಾ ಮಾತನಾಡಿದರು. ಪ್ರಮುಖರಾದ ಟಿ.ವಿ.ಸುದರ್ಶನರೆಡ್ಡಿ, ಕೆ.ಶೋಭಾ, ಶ್ರುತಿ, ಮಹಮ್ಮದ್ ಇತರರಿದ್ದರು. 
ಬಳ್ಳಾರಿ

ರೇಬಿಸ್‌ಗೆ ಸೂಕ್ತ ಚಿಕಿತ್ಸೆ ಪಡೆಯಿರಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಸೂಕ್ತ
  • ಚಿಕಿತ್ಸೆ
  • ಪಡೆದು
ಕಂಪ್ಲಿ: ನಾಯಿ, ಕೋತಿ, ಇಲಿ, ಬೆಕ್ಕು ಕಡಿತವನ್ನು ಅಲಕ್ಷಿಸದೆ ರೇಬಿಸ್ ಕಾಯಿಲೆ ಬಾರದಂತೆ ಚುಚ್ಚುಮದ್ದು ಹಾಕಿಸಿಕೊಳ್ಳಬೇಕೆಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಹಾರಿಕಾ ಹೇಳಿದರು.
ಎಂ.ಡಿ.ಕ್ಯಾಂಪ್‌ನಲ್ಲಿ ರೇಬಿಸ್, ಹಾವು ಕಡಿತದಿಂದ ಮರಣ ತಡೆಯಲು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಪ್ರಾಣಿಗಳ ಕಡಿತದಿಂದ ರೇಬಿಸ್ ಹರಡುವ ಸಾಧ್ಯತೆಯಿದ್ದು ಇದರ ಲಕ್ಷಣಗಳು 3ತಿಂಗಳಿಂದ 6ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಪ್ರಾಣಿ, ಹಾವು ಕಡಿತಕ್ಕೆ ಮೂಢನಂಬಿಕೆಗೆ ಬದಲಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು. ಪುರಸಭೆ ಸದಸ್ಯ ಟಿ.ವಿ.ಸುದರ್ಶನರೆಡ್ಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಸಿಬ್ಬಂದಿ ಮಹಮ್ಮದ್, ದೇವಣ್ಣ, ಮಂಜುನಾಥ, ಚಂದ್ರು ಇತರರಿದ್ದರು.