ಎಮ್ಮಿಗನೂರಿನಲ್ಲಿ ರೈತಸಂಪರ್ಕ ಕೇಂದ್ರದಿಂದ ಜೋಳ ಬೆಳೆ ಕ್ಷೇತ್ರೋತ್ಸವ ನಡೆಯಿತು. ಕೃಷಿ ಅಧಿಕಾರಿಗಳಾದ ಕೆ.ಸೋಮಶೇಖರ, ಜ್ಯೋತಿ, ರೈತರಾದ ಎಂ.ಎಂ.ಬಸವರಾಜಸ್ವಾಮಿ, ಸೂಗಪ್ಪ, ನಾಗರೆಡ್ಡಿ ಇತರರಿದ್ದರು. 
ಬಳ್ಳಾರಿ

ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಿರಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಇಳುವರಿ
  • ಜೋಳ

ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಿರಿ

ಕಂಪ್ಲಿ: ರೈತರು ಜೋಳದೊಂದಿಗೆ ಅಂತರ ಬೆಳೆ ಬೆಳೆಯಲು ಮುಂದಾಗಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಸೋಮಶೇಖರ ಹೇಳಿದರು.
ಎಮ್ಮಿಗನೂರು ಗ್ರಾಮದ ಜೋಳದ ಗದ್ದೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಆಯೋಜಿಸಿದ್ದ ಜೋಳ ಕ್ಷೇತ್ರೋತ್ಸವ ಕಾಯಕ್ರಮದಲ್ಲಿ ಮಾತನಾಡಿದರು.
ಜೋಳದ ಬೆಳೆ ಮಧ್ಯೆ ಹೆಸರು, ಉದ್ದು, ಈರುಳ್ಳಿ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆಯಬಹುದು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಬೆಳೆಗಳಿಗೆ ರೋಗ ಬಾಧೆ ಕಡಿಮೆಯಾಗುತ್ತದೆ.
ಭತ್ತದ ಬೆಳೆಗೆ ಪರ್ಯಾಯವಾಗಿ ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಬೇಕಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯುವಲ್ಲಿ ರೈತರು ಮುಂದಾಗಬೇಕು ಎಂದರು.
ಎಎಒ ಜ್ಯೋತಿ, ಪ್ರಮುಖರಾದ ಜಗದೀಶ, ಎಂ.ಎಂ.ಬಸವರಾಜಸ್ವಾಮಿ, ಸೂಗಪ್ಪ, ನಾಗರೆಡ್ಡಿ, ಅಶ್ವತ್ಥರೆಡ್ಡಿ, ರಾಜಾಸಾಬ್, ಶಿವಪ್ಪ ಇತರರಿದ್ದರು.