ಕಂಪ್ಲಿ ಕೊರಮ್ಮ ದೇವಿ ದೇವಸ್ಥಾನದ ಬಳಿ ಇ-ಖಾತಾ ಜಾಗೃತಿ ಕರಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಕಂಪ್ಲಿ: ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಇ-ಖಾತೆ ಪಡೆದುಕೊಳ್ಳಬೇಕೆಂದು ಪುರಸಭೆ ಕಂದಾಯ ನಿರೀಕ್ಷಕ ಭರಮಣ್ಣ ಹೇಳಿದರು.
ಪಟ್ಟಣದ ಕೊರಮ್ಮ ದೇವಿ ದೇವಸ್ಥಾನದ ಬಳಿ ಇ-ಖಾತಾ ಜಾಗೃತಿ ಕರಪತ್ರ, ನಮೂನೆ-3 ವಿತರಿಸಿ ಬುಧವಾರ ಮಾತನಾಡಿದರು. ಪುರಸಭೆಯಲ್ಲಿ 3600 ಇ-ಖಾತೆ ಆಗಬೇಕಿದೆ. ಅಗತ್ಯ ದಾಖಲಾತಿ ಸಲ್ಲಿಸಿದಲ್ಲಿ ಎರಡು ದಿನದಲ್ಲಿ ನಮೂನೆ-3 ವಿತರಿಸಲಾಗುವುದು. ಮನೆಯಲ್ಲಿಯೇ ಕುಳಿತು ಅತಿ ಸರಳವಾಗಿ ಈ ಸೇವೆ ಪಡೆಯಲು ಸಾಧ್ಯವಿದ್ದು, ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ವಿಷಯ ನಿರ್ವಾಹಕ ಆನಂದ ಗಿರಿಜಾಲಿ, ಸಹಾಯಕ ರಂಗನಾಥ, ಕೊರಮ-ಕೊರಚ ಸಮಾಜದ ತಾಲೂಕು ಅಧ್ಯಕ್ಷ ಕೆ.ಯಂಕಪ್ಪ ಇತರರಿದ್ದರು.