ಸಿರಗುಪ್ಪದ 26ನೇ ವಾರ್ಡ್‌ನಲ್ಲಿ ವಿಶ್ವ ಮಲೇರಿಯ ದಿನ ಆಚರಿಸಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ, ಮಲೇರಿಯಾ ಮೇಲ್ವಿಚಾರಕ ಶ್ರೀನಿವಾಸ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್ ಇತರರಿದ್ದರು. 
ಬಳ್ಳಾರಿ

ಜ್ವರ ಬಂದಾಗ ರಕ್ತ ಪರೀಕ್ಷೆ ಮಾಡಿಸಿ

ಪ್ರಮುಖ ಮುಖ್ಯಾಂಶಗಳು

  • ರಕ್ತ ಪರೀಕ್ಷೆ
  • ವಿಶ್ವ ಮಲೇರಿಯ ದಿನ

ಜ್ವರ ಬಂದಾಗ ರಕ್ತ ಪರೀಕ್ಷೆ ಮಾಡಿಸಿ

ಸಿರಗುಪ್ಪ: ಮಿತಿ ಮೀರಿ ಬೆಳೆಯುತ್ತಿರುವ ಸೊಳ್ಳೆಗಳಿಗೆ ಸ್ವಚ್ಛತೆ ಮೂಲಕ ಕಡಿವಾಣ ಹಾಕಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ ಹೇಳಿದರು.
ಪಟ್ಟಣದ 26ನೇ ವಾರ್ಡ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು ಹಾಗೂ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬೇಕು. ಜ್ವರ ಬಂದಾಗ ರಕ್ತ ಪರೀಕ್ಷೆ ಮಾಡಿಸಿದರೆ ಮುಂದಾಗಬಹುದಾದ ಹಾನಿ ತಡೆಯಬಹುದು.
ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಲು ವಾರದಲ್ಲಿ 2 ದಿನ ಲಾರ್ವ ಸಮೀಕ್ಷೆ ಮಾಡಲಾಗುತ್ತಿದೆ. ಜ್ವರ ಬಂದವರ ಮನೆಯ ಸುತ್ತಲಿನ ನೂರು ಮನೆಗಳ ಸಮೀಕ್ಷೆ ನಡೆಸಿ ಉಚಿತ ಚಿಕಿತ್ಸಾ ಸೌಲಭ್ಯ ನೀಡಲಾಗುವುದು ಎಂದರು.
ಮಲೇರಿಯಾ ಮೇಲ್ವಿಚಾರಕ ಶ್ರೀನಿವಾಸ ಮಾತನಾಡಿ, ಹೊರ ರಾಜ್ಯದಿಂದ ಬಂದವರು, ಪ್ರವಾಸಿ ತಾಣಗಳಿಗೆ ಹೋಗಿ ಬಂದವರು ಅನಾರೋಗ್ಯಕ್ಕೆ ಒಳಪಟ್ಟರೆ ರಕ್ತ ಪರೀಕ್ಷೆ ಮಾಡಿಸಬೇಕು. ಸೊಳ್ಳೆಗಳಿಂದ ರಕ್ಷಣೆಗೆ ಪರದೆ ಬಳಸಬೇಕು ಎಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ಮಲೇರಿಯಾ ಲಿಂಕ್ ವರ್ಕರ್ ಗಣೇಶ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಇತರರಿದ್ದರು.