ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದ ಕ್ರಸ್ಟ್‌ಗೇಟ್‌ಗಳ ಮರು ಅಳವಡಿಕೆ ಕಾಮಗಾರಿಯನ್ನು ಶಾಸಕ ಕೆ.ನೇಮಿರಾಜ್‌ನಾಯ್ಕ ಮಂಗಳವಾರ ಪರಿಶೀಲಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ವಿಎಸ್‌ಎಸ್‌ಎನ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯದ 10 ಕ್ರಸ್ಟ್‌ಗೇಟ್‌ಗಳ ಪೈಕಿ ಎಂಟು ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಒಂದು ತಿಂಗಳೊಳಗೆ ಕೆಲಸ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಮಾಲವಿ ಜಲಾಶಯದ ಕ್ರಸ್ಟ್‌ಗೇಟ್‌ಗಳ ಮರು ಅಳವಡಿಕೆ ಕಾಮಗಾರಿ ಪರಿಶೀಲಿಸಿ ಮಂಗಳವಾರ ಮಾತನಾಡಿದರು. ಈ ಹಿಂದೆ ಜಲಾಶಯ ತುಂಬಿದಾಗ ಗೇಟ್‌ಗಳನ್ನು ಎತ್ತಿ ಹಗರಿ ಹಳ್ಳಕ್ಕೆ ನೀರು ಬಿಡಲಾಗಿತ್ತು. ಆಗ ಐದು ದಶಕಗಳಿಗೂ ಹೆಚ್ಚಿನ ಹಳೆಯದಾದ ಗೇಟ್‌ಗಳನ್ನು ಕೆಳಗೆ ಇಳಿಸಲಾಗಿರಲಿಲ್ಲ. ಜೆಸಿಬಿ ನೆರವಿನೊಂದಿಗೆ ಇಳಿಸುವಾಗ ಜಖಂಗೊಂಡಿದ್ದವು. ಇದರಿಂದಾಗಿ ಸೋರಿಕೆ ಕಂಡು ಬರುತ್ತಿತ್ತು. ಜಲಾಶಯದ ಕೆಳಭಾಗದ ರೈತರ ಮನವಿ ಮೇರೆಗೆ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಗೇಟ್‌ಗಳ ಸಂಪೂರ್ಣ ದುರಸ್ತಿ ಕೈಗೊಳ್ಳಲಾಗಿದೆ . ರಾಜ್ಯ ಸರ್ಕಾರ ಅರ್ಧ ವೆಚ್ಚ ನೀಡಿದರೆ, ಕೇಂದ್ರ ಸರ್ಕಾರದ ಇನ್ನರ್ಧ ಅನುದಾನದಲ್ಲಿ ಕ್ಷೇತ್ರದ 17 ಕೆರೆಗಳನ್ನು ತುಂಭಿಸುವ ಯೋಜನೆ ಕೈಗೊಳ್ಳಲಾಗುವುದು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿದ್ದೇನೆ. ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ದೂರಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ವಿಎಸ್‌ಎಸ್‌ಎನ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ತಾಪಂ ಮಾಜಿ ಸದಸ್ಯ ಆಡೂರು ಶಿವಕುಮಾರ್, ಟಿಎಪಿಸಿಎಂಎಸ್ ಸದಸ್ಯ ಬಸವರಾಜ, ಪ್ರಮುಖರಾದ ಹೋಟೆಲ್ ಸಿದ್ದರಾಜು, ಚಿತ್ತವಾಡ್ಗಿ ಪ್ರಕಾಶ, ಗೋಮಾತ ಕೊಟ್ರೇಶ, ವಿ.ಬಸವರಾಜ, ನೀರಾವರಿ ಇಲಾಖೆ ಎಇಇ ಧರ್ಮರಾಜು ಇದ್ದರು.