ಬಳ್ಳಾರಿಯ ಸುಧಾಕ್ರಾಸ್ ರಸ್ತೆಯಲ್ಲಿರುವ ಟಾಟಾ ಏಜೆನ್ಸಿಯೂ ಎಲ್‌ಪಿಜಿ ಪೂರೈಕೆ ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ. 
ಬಳ್ಳಾರಿ

ಎಲ್‌ಪಿಜಿ ಏಜೆನ್ಸಿಗಳಿಗೆ ಗ್ಯಾಸ್ ಪೂರೈಕೆ ಸ್ಥಗಿತ

ಪ್ರಮುಖ ಮುಖ್ಯಾಂಶಗಳು

  • ಪೂರೈಕೆ
ಬಳ್ಳಾರಿ : ಮಧ್ಯ ಪ್ರಾಚ್ಯ ಯುದ್ಧದ ಕಾರಣ ಜಿಲ್ಲೆಯಲ್ಲಿ ಆಟೋಗಳಿಗೆ ಬಳಸುವ ಎಲ್‌ಪಿಜಿ ಪೂರೈಸುವ ಗ್ಯಾಸ್ ಏಜೆನ್ಸಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದ ಆಟೋ ಚಾಲಕರ ಜೀವನ ಆಯೋಮವಾಗಿದೆ.
ಕೆಲ ದಿನಗಳಿಂದ ಇದೇ ಪರಿಸ್ಥಿತಿ ನೆಲೆಸಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಾಡಾಯಿಸುವ ಜತೆಗೆ ದರವೂ ಏರಿಕೆ ಆಗಿದ್ದೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಗರ ಪ್ರದೇಶದಲ್ಲಿ ಎಲ್‌ಪಿಜಿ ಹಾಗೂ ಸಿಎನ್‌ಜಿ ಸೇರಿ ಒಟ್ಟು ಏಳು ಸಾವಿರಕ್ಕೂ ಅಧಿಕ ಆಟೋಗಳಿವೆ. ಸಿಎನ್‌ಜಿ ಗಿಂತ ಗ್ಯಾಸ್ ಫಿಲ್ಲಿಂಗ್ ಆಟೋಗಳು ಸಂಖ್ಯೆ ಹೆಚ್ಚಾಗಿದೆ. ಶೇ. 70 ರಷ್ಟು ಎಲ್‌ಪಿಜಿ ಆಧಾರಿತ ಆಟೋ ಹಾಗೂ ಶೇ. 30ರಷ್ಟು ಸಿಎನ್‌ಜಿ ಆಧಾರಿತ ಆಟೋಗಳಿವೆ. ಸದ್ಯ, ನಗರದಲ್ಲಿದ್ದ ಎಲ್‌ಪಿಜಿಯ ನಾಲ್ಕು ಏಜೆನ್ಸಿಗಳಲ್ಲಿ ಗ್ಯಾಸ್ ಪೂರೈಕೆ ಸ್ಥಗಿತಗೊಳಿಸಿ ಬಂದ್ ಮಾಡಿವೆ. ಇದರಿಂದ ಎಲ್‌ಪಿಜಿ ಲಭ್ಯತೆ ಇಲ್ಲದೆ ಚಾಲಕರ ಪರದಾಟ ಮುಂದುವರಿದಿದೆ.
ನಗರದಲ್ಲಿ ಸರ್ಕಾರಿ ಸ್ವಾಮ್ಯದ ಎರಡು ಆಟೋ ಎಲ್‌ಪಿಜಿ ಫಿಲ್ಲಿಂಗ್ ಕೇಂದ್ರ ಕಳೆದ ಕೆಲ ದಿನಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಅದಕ್ಕಾಗಿ ಗ್ಯಾಸ್‌ಗಾಗಿ ಆಟೋ ಚಾಲಕರು ಮುಗಿ ಬೀಳುತ್ತಿದ್ದರು. ಸದ್ಯ ಆ ಎರಡು ಏಜೆನ್ಸಿಗಳಿಗೆ ಎಲ್‌ಪಿಜಿ ಪೂರೈಕೆ ಕೊರತೆಯಿಂದ ಅವು ಕೂಡ ಶನಿವಾರ ಬಂದ್‌ಯಾಗಿವೆ.
ಕಳೆದ ಎರಡ್ಮೂರು ದಿನದಿಂದ ಎಲ್‌ಪಿಜಿ ತುಂಬಿಸಿಕೊಳ್ಳಲು ಚಾಲಕರು ಊಟ, ತಿಂಡಿ, ನೀರು ಬಿಟ್ಟು ಬಿಸಿಲಿನಲ್ಲಿ ತಮ್ಮ ಆಟೋಗಳನ್ನು ಕಿ.ಮೀ. ಗಟ್ಟಲೇ ದೂರದವರೆಗೆ ಸರತಿ ಸಾಲಿನಲ್ಲಿ ನಿಲ್ಲಿಸಿಕೊಂಡು ಕಾಯುತ್ತಿದ್ದರು. ಆದರೆ, ಕೆಲ ದಿನಗಳಿಂದ ಆರೇಳು ಗಂಟೆ ಕಾದರೂ ಕೆಲವರಿಗೆ ಗ್ಯಾಸ್ ಸಿಕ್ಕಿಲ್ಲ. ಹೀಗಾಗಿ ಅವರ ಅದಾಯಕ್ಕೆ ಹೊಡೆತ ಬಿದ್ದಿದೆ. ಕೆಲವರು ಗ್ಯಾಸ್ ತುಂಬಿಸಲು ಏಜೆನ್ಸಿಗಳ ಮಾಲೀಕರ ಜತೆ ವಾದ ನಡೆದ ಘಟನೆಗಳು ನಡೆದಿವೆ. ಇನ್ನೂ ಅಂದ್ರಾಳ್, ರೂಪನಗುಡಿ ರಸ್ತೆಯಲ್ಲಿ ಸಿಎನ್‌ಜಿ ಬಂಕ್‌ಯಿವೆ. ನಗರದಲ್ಲಿ ಸಿಎನ್‌ಜಿ ಆಟೋಗಳ ಸಂಚಾರ ಸಾಮಾನ್ಯವಾಗಿದ್ದು, ಸಿಎನ್‌ಜಿ ಕೊರತೆಯಿಲ್ಲ.
ಯುದ್ಧ ಆರಂಭವಾದ ದಿನದಿಂದ ಆಟೋ ಚಾಲಕರು ಎಲ್‌ಪಿಜಿ ದಿನೇದಿನೆ ಬೆಲೆ ಏರಿಕೆ ನಡುವೆಯೂ ಗ್ಯಾಸ್ ತುಂಬಿಸಿಕೊಂಡು ಸಂಚರಿಸಿದರೂ ನಿತ್ಯ ಮಾತ್ರ 600 ರೂ. ದಿಂದ ಏಳು ನೂರು ಸಂಪಾದಿಸುತ್ತಿದ್ದರು. ಇದರಿಂದ ಅದಾಯಕ್ಕೆ ಪೆಟ್ಟು ಬಿದ್ದಿತ್ತು, ಕೆಲವರು ತಮ್ಮ ಆಟೋವನ್ನು ಮನೆಯಲ್ಲಿ ನಿಲ್ಲಿಸಿದ್ದಾರೆ. ಬಾಡಿಗೆ ಓಡಿಸುತ್ತಿದ್ದವರು ಪರ್ಯಾಯ ಕೆಲಸ ನೋಡಿಕೊಳ್ಳುತ್ತಿದ್ದಾರೆ
ಬಾಕ್ಸ್ : ಯುದ್ಧದ ಕರಿನೆರಳು ದೇಶದ ಕೆಲ ಜನರ ಬದುಕನ್ನು ಬುಡೇಮೇಲು ಮಾಡಿದ್ದು ಮಾಧ್ಯಮದ ವರ್ಗದ ಜನರ ಪಾಡಂತೂ ಹೇಳತೀರದು. ನಗರದಲ್ಲಿ ನಾನಾ ವೃತ್ತ ಹಾಗೂ ರಸ್ತೆಗಳಲ್ಲಿ ಆಟೋಗಳ ಸಂಚಾರದಿಂದ ದಟ್ಟಣೆ ಸದಾಕಾಲ ದಟ್ಟಣೆ ಇರುತ್ತಿತ್ತು. ಎಲ್‌ಪಿಜಿ ಸ್ಥಗಿತದಿಂದ ನಾನಾ ರಸ್ತೆಗಳಲ್ಲಿ ಸಂಚಾರ ಖಾಲಿಯಾಗಿ ಕಂಡವು. ಕೆಲವರು ಆಟೋಗಳ ಕೊರತೆಯಿಂದ ನಗರದ ಬಸ್‌ಗಳಿಗೆ ಕಾಯುವುದು ಕಂಡು ಬಂತು.
ಕೋಟ್..ಬಾಡಿಗೆ ದುಡಿಯುವ ಸಲುವಾಗಿ ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾದು ಆಟೋಗೆ ಎಲ್‌ಪಿಜಿ ತುಂಬಿಸಿಕೊಳ್ಳಬೇಕಾಯಿತು. ಎಲ್‌ಪಿಜಿ ಪೂರೈಕೆ ಮುಂದುವರಿದರೆ ಆಟೋ ಮನೆಯಲ್ಲಿ ನಿಲ್ಲಿಸಿ, ಕೆಲ ತಿಂಗಳವರೆಗೆ ಪರ್ಯಾಯ ಕೆಲಸಕ್ಕೆ ಹೋಗುತ್ತೇವೆ.
- ಕಾರ್ತಿಕ, ಆಟೋ ಚಾಲಕ, ಮಿಲ್ಲರಪೇಟೆ ನಿವಾಸಿ, ಬಳ್ಳಾರಿ.
ಕೋಟ್.. ಕಳೆದ ಎರಡ್ಮೂರು ದಿನದಿಂದ ಎಲ್‌ಪಿಜಿ ಆಟೋಗಳಿಗೆ ಸಿಮೀತವಾಗಿ ಪೂರೈಸಲಾಯಿತು. ಶನಿವಾರ ಸಂಪೂರ್ಣವಾಗಿ ಬಂದ್‌ಯಾಗಿದೆ. ಲೋಡ್ ಬರುವುದಾಗಿ ಮೇಲಧಕಾರಿಗಳು ತಿಳಿಸಿದ್ದಾರೆ.
- ಕೆ.ಆರ್.ದೇವರಾಜ್, ಡಿಸಿ ಆಹಾರ ಇಲಾಖೆ, ಬಳ್ಳಾರಿ.