ರೊದ್ದಂ ಮಳಿಗೆಯಲ್ಲಿ ಇಡಿ ಶೋಧ 
ಬಳ್ಳಾರಿ

ರೊದ್ದಂ ಮಳಿಗೆಯಲ್ಲಿ ಇಡಿ ಶೋಧ

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನ
ಬಳ್ಳಾರಿ : ಅಯ್ಯಪ್ಪಸ್ವಾಮಿ ದೇವಸ್ಥಾನದ ಅಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ರೊದ್ದಂ ಅಭರಣ ಮಳಿಗೆ ಹಾಗೂ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಶೋಧ ನಡೆಸಿದರು.
ಕೆಎಸ್‌ಆರ್‌ಪಿ ಸಿಬ್ಬಂದಿಯೊಂದಿಗೆ ಆಗಮಿಸಿದ ಎಂಟು ಅಧಿಕಾರಿಗಳ ತಂಡವೂ ರೊದ್ದಂ ಅಭರಣದ ಮಳಿಗೆಯ ಮಾಲೀಕ ಗೋವರ್ದನ ಮನೆ ಹಾಗೂ ಮಳಿಗೆಯಲ್ಲಿ ದಾಳಿ ನಡೆಸಿ ಅಗತ್ಯ ದಾಖಲೆಗಳು ಪರಿಶೀಲಿಸಿ ವಶಪಡಿಸಿಕೊಂಡಿವೆ. ಗೋವರ್ದನ ಅವರನ್ನು ಈಗಾಗಲೇ ಕೇರಳದ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದಾರೆ. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಅರ್ಚಕ ಉನ್ನಿಕೃಷ್ಣನ್ ನಿರ್ದೇಶನದಂತೆ ದೇವಸ್ಥಾನದ ಬಾಗಿಲುಗಳಿಗೆ ಗೋವರ್ದನ ಚಿನ್ನದ ಲೇಪನ ಮಾಡಿಸಿದ್ದರು. ಆದರೆ, ದೇವಸ್ಥಾನದ ಬಾಗಿಲಿನ ದ್ವಾರಪಾಲಕ ಮೂರ್ತಿಗಳಲ್ಲಿ 4.5 ಕೆ.ಜಿ. ಚಿನ್ನ ನಾಪತ್ತೆಯಾಗಿದೆ. ಇದರ ಸಂಬಂಧ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಇಡಿ ಕೂಡ ದಾಳಿ ನಡೆಸಿದ್ದು, ಡಿಜಿಟಲ್ ಸಾಕ್ಷೃ ಸಂಗ್ರಹಿಸಲಾಗುತ್ತಿದೆ.
===