ಪ್ರಮುಖ ಮುಖ್ಯಾಂಶಗಳು
ಸಿರಿಗೇರಿ:
ದೇಶವು ಪ್ರಗತಿಯ ಉತ್ತುಂಗಕ್ಕೇರಲು ಮತ್ತು ಸಬಲವಾಗಿ ರೂಪುಗೊಳ್ಳಲು ಗುಣಮಟ್ಟದ ಶಿಕ್ಷಣ ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ ಎಂದು ನಿವೃತ್ತ ಹಿರಿಯ
ಮುಖ್ಯ ಶಿಕ್ಷಕ ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಮಾತನಾಡಿದರು.
ಪಾಲಕರು ತಮ್ಮ ಮಕ್ಕಳನ್ನೇ ಅತ್ಯಮೂಲ್ಯ ಆಸ್ತಿಯನ್ನಾಗಿ ರೂಪಿಸಬೇಕು. ಇದು ಮುಂದೊಂದು ದಿನ ಅವರಿಗೆ ಬೆಲೆಬಾಳುವ ಸಂಪತ್ತಾಗಿ ಮಾರ್ಪಡುತ್ತದೆ ಎಂದರು.
ದಿನಸಿ ಅಂಗಡಿ ಮಾಲೀಕರು, ತರಕಾರಿ ವ್ಯಾಪಾರಿಗಳು ಮುಂತಾದ ವಿವಿಧ ವೃತ್ತಿಗಳಲ್ಲಿ ತಮ್ಮ ಬದುಕನ್ನು ಪ್ರಾಮಾಣಿಕವಾಗಿ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರೂ ನಿಜವಾದ
ಸಾಧಕರೇ. ಕೆಲಸದಲ್ಲಿ ಯಾವುದೇ ಕೀಳರಿಮೆ ಬೇಡ, ಕಾಯಕವೇ ನಿರಂತರವಾಗಿರಲಿ ಎಂದು ಕಿವಿಮಾತು ಹೇಳಿದರು
.
ಪ್ರಮುಖ ರಸ್ತೆಗಳಲ್ಲಿ ಪಾದಗಳಿಗೆ ಪುಷ್ಪಗಳನ್ನು ಅರ್ಪಿಸುತ್ತಾ, ಅದ್ದೂರಿ ಮೆರವಣಿಗೆಯ ಮೂಲಕ ವೇದಿಕೆಗೆ ಗೌರವಪೂರ್ವಕವಾಗಿ ಕರೆತಂದರು. ನಂತರ ಶಿಕ್ಷಕರು ಹಾಗೂ ಡಿ ಗ್ರೂಪ್
ನೌಕರರನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.