ಕಂಪ್ಲಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜ.ಹಿರೇಮಠ ಮಾತನಾಡಿದರು. ಪದಾಧಿಕಾರಿಗಳಾದ ಬಿ.ಸುಮಂಗಳಾ, ಬಿ.ಎಂ.ಪುಷ್ಪಾ, ತಾಂಡೂರು ಸುಜಾತಾ, ಅರವಿ ಅನುಪಮ ಇತರರಿದ್ದರು. 
ಬಳ್ಳಾರಿ

18ರಂದು ಆರೋಗ್ಯ ಉಚಿತ ತಪಾಸಣೆ ಶಿಬಿರ

ಪ್ರಮುಖ ಮುಖ್ಯಾಂಶಗಳು

  • ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಮಾಹಿತಿ
  • ಪೂರ್ವಭಾವಿ ಸಭೆ
ಕಂಪ್ಲಿ: ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಜು.18ರಂದು ಯಶಸ್ವಿನಿ ಕಾರ್ಡ್‌ದಾರರಿಗೆ ಹಾಗೂ ಕೆಎಎಸ್‌ಎಸ್ ಹೊಂದಿದ ಸರ್ಕಾರಿ ನೌಕರರಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜ.ಹಿರೇಮಠ ಹೇಳಿದರು.
ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಆಯೋಜಿಸಿರುವ ಆರೋಗ್ಯ ಉಚಿತ ತಪಾಸಣೆ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಶನಿವಾರ ಮಾತನಾಡಿದರು. ರಾಣೆಬೆನ್ನೂರಿನ ಡಾ.ಸಂಜೀವ ಎಂ.ಮುದ್ರಿ ಅವರು ಮೊಣಕಾಲು ಚಿಪ್ಪು, ಬೆನ್ನು ಹುರಿ ಪರೀಕ್ಷಿಸಿ ಉಚಿತ ತಪಾಸಣೆ ನಡೆಸಿ ಮುಂದಿನ ಚಿಕಿತ್ಸೆ ನಿರ್ಧರಿಸುತ್ತಾರೆ. ಮೊಳಕಾಲು ಚಿಪ್ಪು ಬದಲಾವಣೆ, ಚಪ್ಪೆ ಬದಲಾವಣೆ, ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಲಾಗುವುದು.
ಯಶಸ್ವಿನಿ ಕಾರ್ಡ್ ಹೊಂದಿದವರು, ಸರ್ಕಾರಿ ನೌಕರರು ಕೆಎಎಸ್‌ಎಸ್(ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ) ಅಡಿ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಪದಾಧಿಕಾರಿಗಳಾದ ಬಿ.ಸುಮಂಗಳಾ, ಬಿ.ಎಂ.ಪುಷ್ಪಾ, ತಾಂಡೂರು ಸುಜಾತಾ, ಅರವಿ ಅನುಪಮಾ, ಕಾಮರೆಡ್ಡಿ ಉಮಾ, ವಾಲಿ ಶಕುಂತಲಾ, ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಲಿಗಾರ ವೆಂಕಟರೆಡ್ಡಿ, ವೀರಶೈವ ಸಂಘದ ನಿರ್ದೇಶಕ ಎಸ್.ಡಿ.ಬಸವರಾಜ ಇತರರಿದ್ದರು.