ಕಂಪ್ಲಿ ಸಮೀಪದ ಪ್ರಭುಕ್ಯಾಂಪಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಸಾವಿತ್ರಿಬಾಯಿ ಫುಲೆ ಫಾತಿಮಾ ಶೇಖ್ ಸಮುದಾಯ ಸೇವಾ ಟ್ರಸ್ಟ್ ಅಧ್ಯಕ್ಷೆ ಅಮೀನಾ, ಪದಾಧಿಕಾರಿಗಳಾದ ರೇಷ್ಮಾ, ಸಲೀಮಾ ಇತರರಿದ್ದರು. 
ಬಳ್ಳಾರಿ

ಜಾತೀಯತೆ-ತಾರತಮ್ಯದಿಂದ ವಿಮುಕ್ತರಾಗಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಸಮುದಾಯದಲ್ಲಿ
  • ಸಮಾನತೆ
  • ಸಾಧಿಸಬೇಕಿದೆ
ಕಂಪ್ಲಿ: ಸಂವಿಧಾನ ನೀಡಿದ ಹಕ್ಕು ಭಾದ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮಹಿಳೆಯರು ಸಬಲೀಕರಣಗೊಳ್ಳಬೇಕಿದೆ ಎಂದು ಸಾವಿತ್ರಿಬಾಯಿ ಫುಲೆ ಫಾತಿಮಾ ಶೇಖ್ ಸಮುದಾಯ ಸೇವಾ ಟ್ರಸ್ಟ್ ಅಧ್ಯಕ್ಷೆ ಅಮೀನಾ ಹೇಳಿದರು.
ಸಂವಿಧಾನ ನೀಡಿದ ಹಕ್ಕು ಭಾದ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮಹಿಳೆಯರು ಸಬಲೀಕರಣಗೊಳ್ಳಬೇಕಿದೆ ಎಂದು ಸಾವಿತ್ರಿಬಾಯಿ ಫುಲೆ ಫಾತಿಮಾ ಶೇಖ್ ಸಮುದಾಯ ಸೇವಾ ಟ್ರಸ್ಟ್ ಅಧ್ಯಕ್ಷೆ ಅಮೀನಾ ಹೇಳಿದರು.
ಪ್ರಭುಕ್ಯಾಂಪಿನ ಸಮುದಾಯ ಭವನದಲ್ಲಿ ಸೋಮವಾರ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಮಹಿಳೆಯರು ಜಾತೀಯತೆ, ನಾನಾ ತಾರತಮ್ಯಗಳಿಂದ ವಿಮುಕ್ತರಾಗಿ ಸಮುದಾಯದಲ್ಲಿ ಸಮಾನತೆ ಸಾಧಿಸಬೇಕಿದೆ. ಕುಟುಂಬದಲ್ಲಿ ಪರಸ್ಪರ ಗೌರವ, ಭ್ರಾತೃತ್ವ, ನ್ಯಾಯ ಮತ್ತು ಘನತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ. ಮಹಿಳೆಯರು ಸ್ವಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ ಪಾಟೀಲ್, ಸುನೀತಾ, ಈರಮ್ಮ, ಗುರುಪಾದಮ್ಮ, ಮೇರಿ, ಕಸ ವಿಲೇವಾರಿ ವಾಹನ ಚಾಲಕಿ ನಾಗವೇಣಿ, ಕಾರ್ಯಕರ್ತೆಯರಾದ ಲಕ್ಷ್ಮೀ, ಪಾರ್ವತಿ, ನಾರಿಸಖಿ ರಾಜೇಶ್ವರಿ, ಮಾಲಾನ, ಸಂವಿಧಾನ ಸಂಗಾತಿಗಳಾದ ಸಲೀಮಾ, ಎಚ್.ನಾಗಮ್ಮರನ್ನು ಗೌರವಿಸಲಾಯಿತು. ಟ್ರಸ್ಟ್ ಪದಾಧಿಕಾರಿಗಳಾದ ರೇಷ್ಮಾ, ಸಲೀಮಾ, ನಾನಾ ವಾರ್ಡ್‌ಗಳ ಸಂವಿಧಾನ ಸಂಗಾತಿಗಳು ಇತರರಿದ್ದರು.