ಅಧಿಕಾರಿಗಳ ಹೆಸರಿನಲ್ಲಿ ವಂಚನೆ 
ಬಳ್ಳಾರಿ

ಅಧಿಕಾರಿಗಳ ಹೆಸರಿನಲ್ಲಿ ವಂಚನೆ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಿಂದ ಲಕ್ಷಾಂತರ ರೂ. ವಂಚಿಸಿದ ಘಟನೆ
  • ಸರ್ಕಾರಿ ಜಮೀನಿನ ಪಹಣಿ ಕೊಡಿಸುವುದಾಗಿ ನಂಬಿಸಿ
ಬಳ್ಳಾರಿ : ಸರ್ಕಾರಿ ಜಮೀನಿನ ಪಹಣಿ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂ. ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಹಿರೇಹಡ್ಲಿಗಿ ಗ್ರಾಮದ ಹೇಮಂತ ಎಂಬಾತ ಕುರುಗೋಡು ತಾಲೂಕಿನ ಸೋಮಸಮುದ್ರದ 7.96 ಎಕರೆ ಸರ್ಕಾರಿ ಜಮೀನನ್ನು ರಾಮಣ್ಣ ಮತ್ತು ಗಂಗಣ್ಣ ಎಂಬುವವರ ಹೆಸರಿಗೆ ಮಾಡಿಸಿಕೊಡುವುದಾಗಿ ನಂಬಿಸಿ ವಂಚಿಸಿದ್ದಾನೆ.
ಈ ಕೆಲಸಕ್ಕಾಗಿ ಉಪ ವಿಭಾಗಾಧಿಕಾರಿಗೆ (ಎಸಿ) ಹಣ ನೀಡಬೇಕೆಂದು ಹೇಳಿ 13 ಲಕ್ಷ ರೂ. ಹಾಗೂ ಅಗ್ರಿಮೆಂಟ್‌ಗಾಗಿ ಎರಡು ಲಕ್ಷ ರೂ. ಸೇರಿ ಒಟ್ಟು ಹದಿನೈದು ಲಕ್ಷ ರೂ. ವಂಚಿಸಿದ್ದಾರೆ. ವಂಚನೆಗೆ ಪುಷ್ಠಿ ನೀಡಲು ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರಗಳು, ನಕಲಿ ಸಹಿ ಹಾಗೂ ನಕಲಿ ಅಂಚೆ ಲಕೋಟೆಗಳನ್ನು ಸೃಷ್ಟಿಸಿದ್ದ ಹೇಮಂತ ಎಂಬಾತ ಸೃಷ್ಟಿ ಮಾಡಿರುವುದಾಗಿ ದೃಢಪಟ್ಟಿದೆ.
ಅಧಿಕಾರಿಗಳ ಹೆಸರು ದುರುಪಯೋಗಿಸಿಕೊಂಡು ಸಾರ್ವಜನಿಕರನ್ನು ಮೋಸಗೊಳಿಸಿರುವ ಹೇಮಂತನ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಎಸಿ ಎಚ್.ಡಿ.ರಾಜೇಶ್ ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
====