ನಾಲ್ವರ ಬಂಧನ  
ಬಳ್ಳಾರಿ

ವರದಕ್ಷಿಣೆ ಕಿರುಕುಳ ನಾಲ್ವರ ಬಂಧನ

ಶಾಮಸುಂದರ್ ಕೊಪ್ಪಳಕರ್
ಸಿಂಧನೂರು: ಪತಿ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ಸೋಮವಾರ ನಾಲ್ವರನ್ನು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೃಷ್ಣನಗರಕ್ಯಾಂಪಿನ ಕೃಷ್ಣ ಚೈತನ್ಯ, ಅಲಪಾಟಿ ಶ್ರೀನಿವಾಸರಾವ್, ಶ್ರೀಕಾಂತ ಅಲಿಯಾಸ ನಾಗ ಶ್ರೀಕಾಂತ, ಕೃಷ್ಣ ವೆಂಕಟಕೃಷ್ಣ ಬಂಧಿತರು. ನಗರದ ಸತ್ಯ ಎನ್‌ಕ್ಲೇವ್ ರಾಮಕಿಶೋರ ಕಾಲನಿ ನಿವಾಸಿ ಸೂರ್ಯಬಾಬು ಇ. ಅವರ ಪುತ್ರಿ ಅಮೂಲ್ಯ ಅವರನ್ನು ಬಳ್ಳಾರಿ ಜಿಲ್ಲೆಯ ಕೃಷ್ಣ ಚೈತನ್ಯಗೆ ಮದುವೆ ಮಾಡಿಕೊಡಲಾಗಿತ್ತು. ವಿವಾಹ ವೇಳೆ ಕಡಿಮೆ ವರದಕ್ಷಿಣೆ ನೀಡಿದ್ದು, ನಿಮ್ಮ ತಂದೆಯ ಆಸ್ತಿ ನಮ್ಮ ಹೆಸರಿಗೆ ಮಾಡಿಸಬೇಕೆಂದು ಒತ್ತಾಯಿಸಿದ್ದರು. ನಿರಾಕರಿಸಿದ್ದಕ್ಕೆ ದೈಹಿಕ-ಮಾನಸಿಕ ಹಿಂಸೆ ನೀಡಿದ್ದರು. ವರದಕ್ಷಿಣಿ ತಂದರೆ ಮಾತ್ರ ಮನೆಗೆ ಬರುವಂತೆ ಎಚ್ಚರಿಸಿದ್ದರೆಂದು ಅಮೂಲ್ಯ ಅವರು ಪತಿ, ಮಾವ, ಅತ್ತೆ, ಬಾವಂದಿರ ವಿರುದ್ಧ ನಗರ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ಪಿಐ ವೀರಾರಡ್ಡಿ ತಿಳಿಸಿದ್ದಾರೆ.