ಹೂವಿನಹಡಗಲಿಯ ಶಾಖಾ ಗವಿಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ ಆಚರಿಸಲಾಯಿತು. ಪ್ರಾಧ್ಯಾಪಕ ಡಾ.ಮಂಜುನಾಥ ಹಾಲಸ್ವಾಮಿ, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಡಾ.ಶೈಲಜಾ ಪವಾಡಶೆಟ್ರ, ಶಸಾಪ ತಾಲೂಕು ಅಧ್ಯಕ್ಷ ಟಿ.ಎಂ.ನಾಗಭೂಷಣ, ಯುವ ಘಟಕದ ಅಧ್ಯಕ್ಷ ಎಂ.ದಯಾನಂದ ಇತರರಿದ್ದರು. 
ಬಳ್ಳಾರಿ

ಉತ್ತಮ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಡಾ.ಮಂಜುನಾಥ ಹಾಲಸ್ವಾಮಿ ಅನಿಸಿಕೆ

ಹೂವಿನಹಡಗಲಿ:

ಶರಣರು ಈ ನಾಡಿನಲ್ಲಿ ಸಮಾನತೆಯ ಕ್ರಾಂತಿ ಮಾಡಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಜೀವಂತ ಎಂದು ಪ್ರಾಧ್ಯಾಪಕ ಡಾ.ಮಂಜುನಾಥ ಹಾಲಸ್ವಾಮಿ ಹೇಳಿದರು.

ಶಾಖಾಗವಿಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರ ಬದುಕಿನ ತತ್ವಗಳನ್ನು ಯುವಕರು ಅಳವಡಿಸಿಕೊಳ್ಳಬೇಕು. ಕಾಯಕ, ದಾಸೋಹ, ಸಮಾನತೆ ಸಾರಿ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ಉತ್ತಮ ಸಮಾಜ ನಿರ್ಮಾಣದ ಎಲ್ಲರ ಜವಾಬ್ದಾರಿ ಎಂದರು.
ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಡಾ.ಶೈಲಜಾ ಪವಾಡಶೆಟ್ರ, ಶಸಾಪ ತಾಲೂಕು ಅಧ್ಯಕ್ಷ ಟಿ.ಎಂ.ನಾಗಭೂಷಣ, ಯುವ ಘಟಕದ ಅಧ್ಯಕ್ಷ ಎಂ.ದಯಾನಂದ, ಕಾರ್ಯದರ್ಶಿ ಎಚ್.ಬಿ.ರಾಜೇಶ, ಪ್ರಮುಖರಾದ ನಾಗರಾಜ ಮಲ್ಕಿ ಒಡೆಯರ, ಬಿಚ್ಚುಗತ್ತಿ ಖಾಜಾ, ಸುನಿತಾ ನಟರಾಜ್, ಜಾತಪ್ಪ, ಚನ್ನಬಸಯ್ಯ ಇತರರಿದ್ದರು.