ಕಂಪ್ಲಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಕಾಂಗ್ರೆಸ್ ಮುಖಂಡ ರಾಜೇಶ್ ಸಿಂಗ್ ಅನಾವರಣಗೊಳಿಸಿದರು.
ಕಂಪ್ಲಿ: ಬಾಬು ಜಗಜೀವನರಾಮ್ ಅವರ ಹಸಿರುಕ್ರಾಂತಿಯಿಂದ ಭಾರತ ಆಹಾರ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ ಎಂದು ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್.ರುದ್ರಮುನಿ ಹೇಳಿದರು.
ಸಣಾಪುರ-ಬೆಳಗೋಡ್‌ಹಾಳ್ ಮಾರ್ಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಸಂಘದಿಂದ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ, ಸಸಿ ನೆಡುವುದು ಸೇರಿದಂತೆ ನಾನಾ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಮೆಗಳನ್ನು ಅನಾವರಣಗೊಳಿಸಿದ ಹೊಸಪೇಟೆಯ ಕಾಂಗ್ರೆಸ್ ಮುಖಂಡ ರಾಜೇಶ್ ಸಿಂಗ್ ಮಾತನಾಡಿ, ಅಂಬೇಡ್ಕರ್ ಅವರ ಜ್ಞಾನದಾಹವನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳುವ ಅಗತ್ಯ ಇದೆ. ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ಕೆ.ಹುಲುಗಪ್ಪ, ಉಪಾಧ್ಯಕ್ಷರಾದ ಕೃಷ್ಣ, ಮಾರುತಿ, ವಿಜಯ, ಪ್ರಧಾನ ಕಾರ್ಯದರ್ಶಿ ಹೊನ್ನೂರಪ್ಪ, ಸಹ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ಮಾರೇಶ್, ಸಂಘಟನಾ ಸಲಹೆಗಾರರಾದ ಯಲ್ಲಪ್ಪ, ಹನುಮಂತ, ಹುಲುಗಪ್ಪ, ಕನಕ, ಶೇಖರ್, ರಾಘವೇಂದ್ರ, ಪ್ರಕಾಶ್, ಬಾಬು, ಹನುಮಂತಪ್ಪ, ಹುಲುಗಣ್ಣ, ರಾಜಾ, ಪ್ರಮುಖ ಕಟ್ಗಿ ಮೌಲಾಹುಸೇನ್ ಇತರರಿದ್ದರು.