ಕಂಪ್ಲಿ ತಹಸಿಲ್ ಕಚೇರಿಯಲ್ಲಿ ಯೋಗಿನಾರೇಯಣ ಯತೀಂದ್ರರ ಜಯಂತ್ಯುತ್ಸವ ಆಚರಿಸಲಾಯಿತು.
ಕಂಪ್ಲಿ: ಕೈವಾರ ತಾತಯ್ಯ ಅವರ ಕಾಲಜ್ಞಾನ ಧರ್ಮ ಮಾರ್ಗದಲ್ಲಿ ಜೀವನ ಸಾಗಿಸುವಂತೆ ಬೋಧಿಸುತ್ತದೆ ಎಂದು ಬಲಿಜ ಸಂಘದ ನಗರ ಉಪಾಧ್ಯಕ್ಷ ಆರ್.ತಿರುಮಲದೇವರಾಯ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಯೋಗಿ ನಾರೇಯಣ ಯತೀಂದ್ರ ಜಯಂತ್ಯುತ್ಸವದಲ್ಲಿ ಮಂಗಳವಾರ ಮಾತನಾಡಿದರು. ತಾತಯ್ಯ ಅವರ ಉಪದೇಶಗಳನ್ನು ತಪ್ಪದೆ ಪಾಲಿಸಬೇಕಿದೆ. ನಾನಾ ಕ್ಷೇತ್ರಗಳಲ್ಲಿ ಬಲಿಜರು ಹಿಂದುಳಿದ್ದು, ಉದ್ಯೋಗಕ್ಕಾಗಿ 2ಎ ಮೀಸಲಿಗೆ ಸೇರ್ಪಡೆಗೊಳಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಪಟ್ಟಣದ ರಸ್ತೆ, ವೃತ್ತಗಳಿಗೆ ಯೋಗಿ ನಾರೇಯಣ ಯತೀಂದ್ರರ ಹೆಸರು ಇಡುವ ಮೂಲಕ ಅವರ ತತ್ವ, ಆದರ್ಶಗಳಿಗೆ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಕುಟುಂಬದಲ್ಲಿ ಸಾಮರಸ್ಯ, ಪ್ರೀತಿ ಅಳವಡಿಸಿಕೊಂಡಲ್ಲಿ ಆ ಮನೆಯೇ ವೈಕುಂಠವಾಗಿರುತ್ತದೆ. ಸರಳ ಮತ್ತು ಸಂತೋಷದಾಯಕ ಜೀವನ ಸಾಗಿಸುವಂತೆ ಯೋಗಿ ನಾರೇಯಣ ಯತೀಂದ್ರ ಅವರ ಬೋಧನೆಗಳನ್ನು ಸರ್ವರೂ ಅರಿತುಕೊಳ್ಳಬೇಕಿದೆ ಎಂದರು.
ಬಲಿಜ ಸಮಾಜದ ನಗರ ಅಧ್ಯಕ್ಷ ಡಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷ ನಾಗಭೂಷಣ, ಮಹಿಳಾ ಘಟಕದ ಸುನಂದಮ್ಮ, ಪ್ರಮುಖರಾದ ಪಿ.ವೆಂಕೋಬಣ್ಣ, ಇಂಗಳಗಿ ನಾರಾಯಣ, ಡಿ.ಸತೀಶ್, ಶ್ರೀನಿವಾಸ್, ಕೆ.ಶಿವಕುಮಾರ್, ಲೋಕೇಶ್, ಎಸ್.ಪ್ರಕಾಶ, ಮಹಾಬಲಿ, ಮಲ್ಲಿಕಾರ್ಜುನ, ರಾಮು, ಯಮನೂರಪ್ಪ, ಡಿಟಿ ಬಿ.ರವೀಂದ್ರಕುಮಾರ, ಇಸಿಒ ಟಿ.ಎಂ.ಬಸವರಾಜ, ಶಿರಸ್ತೇದಾರರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ್, ವಿಎಒ ಲಕ್ಷ್ಮಣನಾಯಕ, ಮಾಲತೇಶ ದೇಶಪಾಂಡೆ ಇತರರಿದ್ದರು.