ಹಗರಿಬೊಮ್ಮನಹಳ್ಳಿ ತಾಲೂಕಿನ ಯಡ್ರಮ್ಮನಹಳ್ಳಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿ ಕಲಾವಿದರಿಂದ ಕಿರುನಾಟಕ ಪ್ರದರ್ಶನ ಗೊಂಡಿತು.
ನಿವೃತ್ತ ಶಿಕ್ಷಕ ವಿ.ಬಿ.ಮಲ್ಲೇಶಪ್ಪ ಅನಿಸಿಕೆ ದತ್ತಿ ಕಾರ್ಯಕ್ರಮ ಉದ್ಘಾಟನೆ
ಹಗರಿಬೊಮ್ಮನಹಳ್ಳಿ: ಗ್ರಾಮೀಣ ಸೊಗಡಾದ ಜಾನಪದ, ನೃತ್ಯ ಹಾಗೂ ನಾಟಕಗಳನ್ನು ಹಳ್ಳಿಗಳಲ್ಲಿ ಕಾಣಬಹುದಾಗಿದೆ ಎಂದು ನಿವೃತ್ತ ಶಿಕ್ಷಕ ವಿ.ಬಿ.ಮಲ್ಲೇಶಪ್ಪ ಹೇಳಿದರು.
ತಾಲೂಕಿನ ಯಡ್ರಾಮನಹಳ್ಳಿಯಲ್ಲಿ ಯುಗಾದಿ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ ಮತ್ತು ಗ್ರಾಮದ ಯುವಕರಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣರ ಪ್ರೋತ್ಸಾಹದಿಂದ ಇನ್ನೂ ಹಲವಾರು ಕಲೆಗಳು ಜೀವಂತವಾಗಿ ಉಳಿದಿವೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬ ಹರಿದಿನಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದು. ಗ್ರಾಮದವರ ಸಹಕಾರದಿಂದ ಮರಿಯಮ್ಮನಹಳ್ಳಿ ಕಲಾವಿದರನ್ನೊಳಗೊಂಡು ಜಾನಪದ, ನೃತ್ಯ ಹಾಗೂ ರೈತರ ಧ್ವನಿ ಎನ್ನುವ ಕಿರು ನಾಟಕ ಕೂಡ ಜನಮನ ಸೆಳೆಯುತ್ತಿದೆ. ಹಳ್ಳಿಗಾಡಿನ ಜನರಲ್ಲಿ ಸಂಸ್ಕಾರ, ಸಾಂಸ್ಕೃತಿ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಈ ಜನರೇ ಕಲಾವಿದರನ್ನು ಪೂಜಿಸಿ, ಪೋಷಿಸುತ್ತಾರೆ ಎಂದರು.
ಗ್ರಾಮದ ಪ್ರಮುಖರಾದ ಶಿವರಾಮಪ್ಪ, ಜಗದೀಶ, ಕುರಿ ಮುದಕಪ್ಪ, ಉಮೇಶ, ವೀರೇಶ, ಮಹಾದೇವಪ್ಪ, ವೀರಣ್ಣ, ಶಿವಮೂರ್ತೆಪ್ಪ, ಕೊಟ್ರಗೌಡ, ಬಸವರಾಜ, ಕೊಟ್ರಪ್ಪ, ಸಂಗಪ್ಪ, ಪ್ರಶಾಂತ, ಹನುಮಂತಪ್ಪ, ನಾಗೇಂದ್ರ, ಕೊಟ್ರೇಶ, ದುರುಗಪ್ಪ, ಮರಿಯಪ್ಪ, ಅಮರೇಶಪ್ಪ, ದೇವಪ್ಪ, ಶಿವಪ್ಪ, ಹುಳ್ಳಿ ಹುಲುಗಪ್ಪ, ತಂಬ್ರಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎಸ್.ವಿ.ಪಾಟೀಲ್ , ಕಸಾಪ ತಾಲೂಕು ಕಾರ್ಯದರ್ಶಿ ಮಾರುತಿ, ಖಜಾಂಚಿ ಪ್ರಹ್ಲಾದ ಇತರರಿದ್ದರು.