ತೆಕ್ಕಲಕೋಟೆಯಲ್ಲಿ ಮಗುವಿಗೆ ಡೆಂಘೆ ಜ್ವರ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪಪಂನಿಂದ ಫಾಗಿಂಗ್ ಮಾಡಿಸಲಾಯಿತು. 
ಬಳ್ಳಾರಿ

ತೆಕ್ಕಲಕೋಟೆ 14ನೇ ವಾರ್ಡ್‌ನಲ್ಲಿ ಪಪಂನಿಂದ ಫಾಗಿಂಗ್

ಅಶೋಕ್ ಕುಮಾರ್ ಎನ್
ಸಿರಗುಪ್ಪ: ತೆಕ್ಕಲಕೋಟೆ 14ನೇ ವಾರ್ಡ್‌ನಲ್ಲಿ ಮಗುವಿಗೆ ಡೆಂಘೆ ಜ್ವರ ಧೃಡಗೊಂಡಿರುವ ಹಿನ್ನೆಲೆಯಲ್ಲಿ ಪಂಚಾಯಿತಿಯಿಂದ ಫಾಗಿಂಗ್ ಮಾಡಿಸಲಾಯಿತು. ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಅನ್ನಪೂರ್ಣ ಮಾತನಾಡಿ, ಡೆಂಘೆ ಜ್ವರ ಧೃಡಗೊಂಡಿರುವ ಬಸರೆಕಟ್ಟೆ ಪ್ರದೇಶದಲ್ಲಿ ಮನೆಗಳ ಒಳಾಂಗಣ ಹಾಗೂ ಸಾರ್ವಜನಿಕ ಕಟ್ಟೆ, ಚರಂಡಿ, ತಿಪ್ಪೆಗುಂಡಿಯಲ್ಲಿ ಫಾಗಿಂಗ್ ಮಾಡಲಾಗಿದೆ. ಸಾರ್ವಜನಿಕರಿಗೆ ಸ್ವಚ್ಛತೆ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ತೆಕ್ಕಲಕೋಟೆ, ಉಪ್ಪಾರ ಹೊಸಳ್ಳಿ, ಬಲಕುಂದಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಡೆಂೆ ಪ್ರಕರಣಗಳು ವರದಿಯಾಗಿದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.