ಹಗರಿಬೊಮ್ಮನಹಳ್ಳಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನಡೆಯಿತು. ಹಿರಿಯ ನ್ಯಾಯಾಧೀಶ ಡಿ.ಕೆ.ಮಧುಸೂದನ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೊಟ್ರೇಶ ಶೆಟ್ಟರ್, ಉಪಾಧ್ಯಕ್ಷ ಬಿ.ಎಂ.ಆಂಜನೇಯ, ಮಾಜಿ ಕಾರ್ಯಧ್ಯಕ್ಷ ಟಿ.ಜಿ.ಎಂ.ಕೊಟ್ರೇಶ ಇತರರಿದ್ದರು. 
ಬಳ್ಳಾರಿ

ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ 5 ಜೋಡಿಗಳು ರಾಜಿ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಲೋಕ ಅದಾಲತ್‌
  • 974ರಲ್ಲಿ 67 ಪ್ರಕರಣಗಳ ಇತ್ಯರ್ಥ
ಹಗರಿಬೊಮ್ಮನಹಳ್ಳಿ: ಪಟ್ಟಣದ ನ್ಯಾಯಾಲಯದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವೆಗಳ ಸಮಿತಿಯಡಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕಾಗಿ ಸಲ್ಲಿಸಿದ್ದ ಅರ್ಜಿಗಳಲ್ಲಿ 5 ಜೋಡಿಗಳು ರಾಜೀ ಮೂಲಕ ಹೊಂದಾದರು.
ಹಿರಿಯ ನ್ಯಾಯಾಧೀಶ ಡಿ.ಕೆ.ಮಧುಸೂದನ್ ಅವರು ವಿಚ್ಛೇದನ ಬಯಸಿದ್ದ ಜೋಡಿಗಳಿಗೆ ಸಲಹೆ ನೀಡಿ ಮನವೊಲಿಸಿದರು. ಚೆಕ್‌ಬೌನ್ಸ್ ಪ್ರಕರಣಗಳು ಪಾಲು ವಿಭಾಗ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳಲ್ಲಿ ಕಕ್ಷಿದಾರರು ಹಾಗೂ ವಕೀಲರು ರಾಜೀ ಸಂಧಾನದ ಮೂಲಕ 974 ಪ್ರಕರಣಗಳ ಪೈಕಿ 67 ಪ್ರಕರಣಗಳನ್ನು ಇತ್ಯರ್ಥ ಮಾಡಿ 2.58 ಕೋಟಿ ರೂ. ಪರಿಹಾರ ನೀಡಲಾಯಿತು.
ಸಿವಿಲ್ ನ್ಯಾಯಾಧೀಶ ಸೈಯ್ಯದ್ ಮೋಹಿದ್ದಿನ್ ಅವರು 755 ಪ್ರಕರಣಗಳಲ್ಲಿ 66 ಇತ್ಯರ್ಥ ಮಾಡಿ 33.85 ಲಕ್ಷ ರೂ. ಪರಿಹಾರ ನೀಡಲಾಯಿತು. 823 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 13 ಪ್ರಕರಣಗಳನ್ನು ಇತ್ಯರ್ಥ ಪಡಿಸಿ 20.77 ಲಕ್ಷ ರೂ. ಪರಿಹಾರ ನೀಡಲಾಯಿತು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೊಟ್ರೇಶ ಶೆಟ್ಟರ್, ಉಪಾಧ್ಯಕ್ಷ ಬಿ.ಎಂ.ಆಂಜನೇಯ, ಮಾಜಿ ಅಧ್ಯಕ್ಷ ಪಿ.ರಮೇಶ, ಮಾಜಿ ಕಾರ್ಯಧ್ಯಕ್ಷ ಟಿ.ಜಿ.ಎಂ.ಕೊಟ್ರೇಶ, ಹಿರಿಯ ವಕೀಲರಾದ ವಿಶಾಲಾಕ್ಷಮ್ಮ, ವಕೀಲರು ಲಿಂಗನಗೌಡ, ಸಿ.ಹುಲುಗಪ್ಪ, ಎಚ್.ಆಂಜನೇಯ, ಡಿ.ಮಂಜಣ್ಣ, ವಸಂತಿ ಸಲ್ಮಾನಿ, ಸಿಬ್ಬಂದಿ ಇದ್ದರು.