ಕಂಪ್ಲಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್, ಪ್ರಮುಖರಾದ ಕೆ.ಶ್ರೀನಿವಾಸರಾವ್, ಎನ್.ಹಬೀಬ್ ರೆಹಮಾನ್, ಕೆ.ತಿಮ್ಮಾರೆಡ್ಡಿ, ಸಿ.ಆರ್.ಹನುಮಂತ ಇತರರಿದ್ದರು. 
ಬಳ್ಳಾರಿ

2.18 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಭೂಮಿ ಪೂಜೆ

2.18 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ

ಕಂಪ್ಲಿ: ತಾಲೂಕಿನ ನಿವಾಸಿಗಳ ಬಹುವರ್ಷಗಳ ಬೇಡಿಕೆಯಂತೆ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ನಂ.10 ಮುದ್ದಾಪುರ ವ್ಯಾಪ್ತಿಯ ಪ್ರಜಾಸೌಧದ ಬಳಿ ಕೆಕೆಆರ್‌ಡಿಬಿಯ 2.18 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. 4.60 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ 36 ರಸ್ತೆಗಳ ಅಭಿವೃದ್ಧಿ, 33 ಕೋಟಿ ರೂ. ವೆಚ್ಚದಲ್ಲಿ 5 ಮತ್ತು 12ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ತಿಮ್ಮಾರೆಡ್ಡಿ ಮಾತನಾಡಿ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಗ್ನಿಶಾಮಕ ಠಾಣೆಗೆ 2 ಎಕರೆ ಭೂಮಿ ನಿಗದಿಯಾಗಿದೆ. 2.18ಕೋಟಿ ರೂ. ವೆಚ್ಚದಲ್ಲಿ ಟೂ ಬೇ(ಎರಡು ಗಾಡಿ ಗ್ಯಾರೇಜು) ಠಾಣೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕಣಿವೆ ತಿಮ್ಮಲಾಪುರದಲ್ಲಿ 3 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಪಿಡಿಒ ಶಿಲ್ಪಾರಾಣಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್, ಪೊಲೀಸ್ ಗೃಹ ನಿರ್ಮಾಣ ಮಂಡಳಿ ಎಇಇ ಚಂದ್ರಕಾಂತ, ಜೆ.ಇ.ರವಿಕುಮಾರ್, ಪ್ರಮುಖರಾದ ಕೆ.ಶ್ರೀನಿವಾಸರಾವ್, ಎನ್.ಹಬೀಬ್ ರೆಹಮಾನ್, ಕೆ.ಮಸ್ತಾನ್, ಸಿ.ಆರ್.ಹನುಮಂತ, ಬಿ.ಜಾಫರ್, ಕೆ.ಎಂ.ಹೇಮಯ್ಯಸ್ವಾಮಿ, ಬಳೆ ಮಲ್ಲಿಕಾರ್ಜುನ, ವಾಲ್ಮೀಕಿ ರಘು, ವಿಪ್ರದ ನಾರಾಯಣಪ್ಪ, ಬಳ್ಳಾರಿ ಮಾಧವ ಇತರರಿದ್ದರು.